ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮೃತರ ಸಂಖ್ಯೆ 63ಕ್ಕೆ

ಮತ್ತೆ 25 ಜನರಿಗೆ ಕೋವಿಡ್ ಸೋಂಕು
Last Updated 20 ಜುಲೈ 2020, 14:42 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಸೋಮವಾರ 25 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಕೋವಿಡ್ ವೈರಾಣು ಪೀಡಿತರ ಸಂಖ್ಯೆ 1,403ಕ್ಕೆ ಹಾಗೂ ಮೃತರ ಸಂಖ್ಯೆ 63ಕ್ಕೆ ತಲುಪಿದೆ.

ಬೀದರ್‌ನ 79 ವರ್ಷದ ಪುರುಷ ಉಸಿರಾಟ ತೊಂದರೆಯಿಂದಾಗಿ ಜುಲೈ 8 ರಂದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಿಸದೆ 17 ರಂದು ಕೊನೆಯುಸಿರೆಳೆದಿದ್ದರು. ಹುಮನಾಬಾದ್‌ನ 65 ವರ್ಷದ ಇನ್ನೊಬ್ಬ ಪುರುಷ ಉಸಿರಾಟ ಸಮಸ್ಯೆಯಿಂದಾಗಿ ಜುಲೈ 4 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜುಲೈ 8 ರಂದು ಕೊನೆಯುಸಿರೆಳೆದಿದ್ದರು. ಬೀದರ್‌ನ 65 ವರ್ಷದ ಮತ್ತೊಬ್ಬರು ತೀವ್ರ ಜ್ವರ ಹಾಗೂ ಉಸಿರಾಟ ತೊಂದರೆಯಿಂದಾಗಿ 11 ರಂದು ಆಸ್ಪತ್ರೆಯಲ್ಲಿ ದಾಖಲಾಗಿ ಮರುದಿನ ಸಾವಿಗೀಡಾಗಿದ್ದರು. ಬಸವಕಲ್ಯಾಣದ 78 ವರ್ಷದ ವ್ಯಕ್ತಿ ಅಧಿಕ ರಕ್ತದೊತ್ತಡ ಹಾಗೂ ಪಾರ್ಶ್ವವಾಯುದಿಂದಾಗಿ ಜುಲೈ 4 ರಂದು ಆಸ್ಪತ್ರೆಗೆ ದಾಖಲಾಗಿ, ಜುಲೈ 5ರಂದು ಕೊನೆಯುಸಿರೆಳೆದಿದ್ದರು. ನಾಲ್ವರು ವೃದ್ಧರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ.

ಬರಬೇಕಿದೆ 1,004 ಮಂದಿ ವರದಿ

ಬೀದರ್ ಜಿಲ್ಲೆಯಲ್ಲಿ ಈವರೆಗೆ 46,354 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇವರಲ್ಲಿ 43,910 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಹಾಗೂ 1,403 ಜನರ ವರದಿ ಪಾಸಿಟಿವ್ ಬಂದಿದೆ.

ಬೀದರ್ ತಾಲ್ಲೂಕಿನ 17, ಹುಮನಾಬಾದ್‌ನ ಐವರು, ಬಸವಕಲ್ಯಾಣದ ಇಬ್ಬರು ಹಾಗೂ ಜಹೀರಾಬಾದ್‌ನ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಲ್ಲಿ 5 ಹಾಗೂ 15 ವರ್ಷದ ಇಬ್ಬರು ಬಾಲಕಿಯರು, ಮೂವರು ಮಹಿಳೆಯರು ಹಾಗೂ 20 ಪುರುಷರು ಇದ್ದಾರೆ. ನಾಲ್ವರು ವೈದ್ಯರು, ಒಬ್ಬ ವಕೀಲ, ಪತ್ನಿ ಹಾಗೂ 15 ವರ್ಷದ ಪುತ್ರನಿಗೆ ಸೋಂಕು ತಗುಲಿದೆ.

818 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ 78 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,041 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT