ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ

Published 4 ಜುಲೈ 2024, 15:14 IST
Last Updated 4 ಜುಲೈ 2024, 15:14 IST
ಅಕ್ಷರ ಗಾತ್ರ

ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವಂತೆ ವಿವಿಧ ಕನ್ನಡ ಸಂಘಟನೆಗಳು ಆಗ್ರಹಿಸಿವೆ.

ವೀರ ಕನ್ನಡಿಗರ ಸೇನೆ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಕನ್ನಡಿಗರ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಜಿಲ್ಲಾ ಘಟಕದ ಪ್ರಮುಖರು ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಈ ಭಾಗದ ಸಾಹಿತಿಗಳು ಬರೆದಿರುವ ಕೃತಿಗಗಳನ್ನು ಕೆಕೆಆರ್‌ಡಿಬಿ ಖರೀದಿಸಬೇಕು. ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಬೇಕು. ಹಳೆ ಪಡಿತರ ಚೀಟಿ ನವೀಕರಿಸಬೇಕು. ಹೊಸ ಪಡಿತರ ಚೀಟಿ ಪಡೆಯಲು ಮೂರು ತಿಂಗಳ ಕಾಲಾವಕಾಶ ನೀಡಬೇಕು. ಬಿದಿವ್ಯಾಪಾರಿಗಳಿಗೆ ಭದ್ರತೆ ಕಲ್ಪಿಸಬೇಕು. ಖಾತಾ, ಮೋಟೆಷನ್‌ನಿಗೆ ಜನರಿಂದ ಹಣ ಕೇಳುತ್ತಿದ್ದು ಅದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ ಭವಾನಿ, ಉಪಾಧ್ಯಕ್ಷ ಆನಂದ ಪಾಟೀಲ ಯರನಳ್ಳಿ, ಶರಣಪ್ಪ ಯದಲಾಪೂರ, ರವಿ ಈಶ್ವರ, ವೆಂಕಟ್‌ ಚಿದ್ರಿ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ವೀರ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಮುಕೇಶ ಶಹಗಂಜ್, ತಾಲ್ಲೂಕು ಅಧ್ಯಕ್ಷ ಅಂಬಾದಾಸ ಸೈನೆ, ಸಂದೀಪ ಚಾಂಬೋಳ, ರಾಹುಲ ಬೌದ್ಧೆ, ದೇವರಾಜ ಪತಂಗೆ, ಚಂದ್ರಕಾಂತ ದೇವಕೆ, ಪ್ರದೀಪ ರೆಡ್ಡಿ, ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷ ಅವಿನಾಶ ಬುಧೇರಾಕರ್, ಜಿಲ್ಲಾ ಉಪಾಧ್ಯಕ್ಷ ಸ್ಟೀಫನ್‌ ಪೌಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT