ಬೀದರ್: ಕೊರೊನಾ ಸೋಂಕಿನ ಕಾರಣ ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕ, ಲಿಂಗಾಯತ ಸಮಾಜ ಜಿಲ್ಲಾ ಘಟಕ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ ಶ್ರಾವಣ ಪ್ರಯುಕ್ತ ಜುಲೈ 21 ರಿಂದ ಆಗಸ್ಟ್ 20 ರ ವರೆಗೆ ಡಿಜಿಟಲ್ ಬಸವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ಬೆಂಗಳೂರಿನಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಒಂದು ತಿಂಗಳ ಕಾರ್ಯಕ್ರಮವು ಬಸವ ಮಂಟಪದ ಮಾತೆ ಸತ್ಯದೇವಿ ಅವರ ನೇತೃತ್ವದಲ್ಲಿ ಜರುಗಲಿದೆ.

21 ರಂದು ಸೋಮಶೇಖರ ಪಾಟೀಲ ಗಾದಗಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಮಾತೆ ಗಂಗಾದೇವಿ ಸಾನಿಧ್ಯ ವಹಿಸುವರು. 22 ರಂದು ಕುಶಾಲರಾವ್ ಪಾಟೀಲ ಖಾಜಾಪುರ ಅಧ್ಯಕ್ಷತೆ ವಹಿಸುವರು. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಲಿಂಗಾಚಾರ-ಏಕದೇವೋಪಾಸನೆ ಕುರಿತು ಉಪನ್ಯಾಸ ನೀಡುವರು.

23 ರಂದು ಶಿವರಾಜ ಪಾಟೀಲ ಅತಿವಾಳ ಅಧ್ಯಕ್ಷತೆ ವಹಿಸುವರು. ಜಗದ್ಗುರು ಬಸವಕುಮಾರ ಸ್ವಾಮೀಜಿ ಲಿಂಗಾಂಗಯೋಗ ಕುರಿತು ಉಪನ್ಯಾಸ ನೀಡುವರು. 24 ರಂದು ಶಿವಶರಣಪ್ಪ ಪಾಟೀಲ ಹಾರೂರಗೇರಿ ಅಧ್ಯಕ್ಷತೆ ವಹಿಸುವರು. ಬಸವಪ್ರಭು ಸ್ವಾಮೀಜಿ ದಾಂಪತ್ಯ ಧರ್ಮ ಕುರಿತು ಉಪನ್ಯಾಸ ನೀಡುವರು.

25 ರಂದು ಸುಷ್ಮಾ ಸಿ. ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸುವರು. ಮಹದೇಶ್ವರ ಸಂಗಮದ ಸಾನಿಧ್ಯ ವಹಿಸುವರು. ಬಸವರಾಜ ಸಂಗಮದ ಶರಣರ ದೃಷ್ಟಿಯಲ್ಲಿ ಬಸವಣ್ಣನವರು ಕುರಿತು ಉಪನ್ಯಾಸ ನೀಡುವರು. 26 ರಂದು ಮನ್ಮಥಯ್ಯ ಸ್ವಾಮಿ ಅಧ್ಯಕ್ಷತೆ ವಹಿಸುವರು. ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಸಂಸ್ಕಾರ ಕುರಿತು ಉಪನ್ಯಾಸ ನೀಡುವರು. 27 ರಂದು ಶಾಂತಪ್ಪ ಮುಗಳಿ ಅಧ್ಯಕ್ಷತೆ ವಹಿಸುವರು.

ಜಗದ್ಗುರು ಜ್ಞಾನೇಶ್ವರಿ ಭಕ್ತಸ್ಥಲ ಕುರಿತು ಉಪನ್ಯಾಸ ನೀಡುವರು. 28 ರಂದು ಮಲ್ಲಯ್ಯ ಸ್ವಾಮಿ ಅಧ್ಯಕ್ಷತೆ ವಹಿಸುವರು. ಅನಿಮಿಷಾನಂದ ಸ್ವಾಮೀಜಿ ಶರಣರ ದೃಷ್ಟಿಯಲ್ಲಿ ಸ್ತ್ರೀ ಸಮಾನತೆ ಕುರಿತು ಉಪನ್ಯಾಸ ನೀಡುವರು. 29 ರಂದು ಗಂಗಶೆಟ್ಟಿ ಪಾಟೀಲ ಅಧ್ಯಕ್ಷತೆ ವಹಿಸುವರು. ಬಸವಪ್ರಕಾಶ ಸ್ವಾಮೀಜಿ ಲಿಂಗಾಯತ ಧರ್ಮ ಪುನರುತ್ಥಾನ ಕುರಿತು ಉಪನ್ಯಾಸ ನೀಡುವರು.

ಪ್ರತಿ ವರ್ಷ ಶ್ರಾವಣ ನಿಮಿತ್ತ ಮನೆ ಮನೆಯಲ್ಲಿ ಬಸವ ಜ್ಯೋತಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಕೊರೊನಾ ಸೋಂಕಿನ ಕಾರಣ ಈ ಬಾರಿ ಡಿಜಿಟಲ್ ಬಸವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಬಸವ ದಳದ ಬೀದರ್ ದಕ್ಷಿಣ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ ತಿಳಿಸಿದ್ದಾರೆ.

ಗೂಗಲ್ ಮೀಟ್ ಆ್ಯಪ್ನಲ್ಲಿ ಪ್ರತಿ ದಿನ ಸಂಜೆ 7 ರಿಂದ ರಾತ್ರಿ 8.15 ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಭಕ್ತರು ಗೂಗಲ್ ಮೀಟ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಕಾರ್ಯಕ್ರಮ ವೀಕ್ಷಿಸಬಹುದು. ಭಕ್ತರಿಗೆ ಕಾರ್ಯಕ್ರಮ ವೀಕ್ಷಣೆಗೆ ಲಿಂಕ್ ಕೊಡಲಾಗುವುದು. ಅದೇ ಲಿಂಕ್ ಒಂದು ತಿಂಗಳ ಕಾಲ ಇರಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.