ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ಕೋರ್ಸ್: ಸಿಪೆಟ್ ಜಾಗೃತಿ

Last Updated 29 ಜುಲೈ 2021, 13:53 IST
ಅಕ್ಷರ ಗಾತ್ರ

ಬೀದರ್: ಮೈಸೂರಿನಲ್ಲಿ ಇರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್)ಯು ಜಿಲ್ಲೆಯಲ್ಲೂ ವಿವಿಧ ಡಿಪ್ಲೊಮಾ ಕೋರ್ಸ್‍ಗಳ ಜಾಗೃತಿ ಮೂಡಿಸುತ್ತಿದೆ.

ಸಂಸ್ಥೆಯ ಅಧಿಕಾರಿಗಳು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಭೇಟಿ ಕೊಟ್ಟು, ಶಿಕ್ಷಕರು, ಉಪನ್ಯಾಸಕರು, ಪಾಲಕರಿಗೆ ಎಸ್ಸೆಸ್ಸೆಲ್ಸಿ, ಐಟಿಐ, ಪಿಯುಸಿ ಹಾಗೂ ಬಿ.ಎಸ್ಸಿ ನಂತರದ ಡಿಪ್ಲೊಮಾ ಕೋರ್ಸ್‍ಗಳ ಮಾಹಿತಿ ನೀಡುತ್ತಿದ್ದಾರೆ.

ಸಿಪೆಟ್ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಕರ್ನಾಟಕದವರಿಗೆ ಆದ್ಯತೆ ನೀಡಲಾಗುತ್ತಿದೆ. ದೀರ್ಘಾವಧಿ, ಅಲ್ಪಾವಧಿ ತರಬೇತಿಯನ್ನೂ ಕೊಡಲಾಗುತ್ತಿದೆ. ವಿದ್ಯಾರ್ಥಿ ವೇತನ, ಹಾಸ್ಟೇಲ್ ಸೌಲಭ್ಯ ಇದೆ. ಇಲ್ಲಿ ವ್ಯಾಸಂಗ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ದೊರಕಿದೆ. ಅನೇಕರು ಸ್ವ ಉದ್ಯೋಗ ಆರಂಭಿಸಿದ್ದಾರೆ ಎಂದು ಸಿಪೆಟ್‍ನ ತಾಂತ್ರಿಕ ಅಧಿಕಾರಿ ಲಕ್ಷ್ಮಣ ತಿಳಿಸಿದರು.

ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆಯಾದವರು ಅಥವಾ ಎಸ್ಸೆಸ್ಸೆಲ್ಸಿಯೊಂದಿಗೆ ಎರಡು ವರ್ಷಗಳ ಐಟಿಐ(ಫಿಟ್ಟರ್, ಟರ್ನರ್, ಮೆಕ್ಯಾನಿಸ್ಟ್, ಡ್ರಾಫ್ಟ್‍ಮನ್) ಕೋರ್ಸ್ ಪೂರೈಸಿದವರು ಎರಡು ವರ್ಷಗಳ ಅವಧಿಯ ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಮತ್ತು ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ) ಕೋರ್ಸ್‍ಗೆ ಪ್ರವೇಶ ಪಡೆಯಬಹುದು ಎಂದು ಹೇಳಿದರು.

ಮೂರು ವರ್ಷಗಳ ಅವಧಿಯ ಡಿಪಿಎಂಟಿ ಹಾಗೂ ಡಿಪಿಟಿ ಕೋರ್ಸ್‍ಗಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣರಾದವರೂ ಅರ್ಜಿ ಸಲ್ಲಿಸಬಹುದು. 2 ವರ್ಷಗಳ ಪೋಸ್ಟ್ ಗ್ಯಾಜುಯೇಟ್ ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ ಆ್ಯಂಡ್ ಟೆಸ್ಟಿಂಗ್ (ಪಿಜಿಡಿ-ಪಿಪಿಟಿ) ಕೋರ್ಸ್ ಅಧ್ಯಯನಕ್ಕೆ ಬಿ.ಎಸ್ಸಿ (ಮೂರು ವರ್ಷ) ತೇರ್ಗಡೆಯಾಗಿರಬೇಕು ಎಂದು ತಿಳಿಸಿದರು.

ಪಾಲಿಮರ್ ಮತ್ತು ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗ ಅವಕಾಶಗಳು ಇವೆ. ಕೋರ್ಸ್ ಪೂರೈಸಿದ ಕೂಡಲೇ ಉದ್ಯೋಗ ಗಿಟ್ಟಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಿಪೆಟ್ ಕೋರ್ಸ್‍ಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಕೋರ್ಸ್‍ಗಳ ಮಾಹಿತಿಗೆ ಸಿಪೆಟ್, #437/ಎ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೆಟಗಳ್ಳಿ, ಮೈಸೂರು- 570016 ಗೆ ಖುದ್ದು ಅಥವಾ ದೂರವಾಣಿ ಸಂಖ್ಯೆ 0821-2510618, ಮೊಬೈಲ್ ಸಂಖ್ಯೆ 9141075968, 9845873498ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT