ಬುಧವಾರ, ಆಗಸ್ಟ್ 17, 2022
23 °C
ವಿವಿಧ ಗ್ರಾಮಗಳಲ್ಲಿ ಶಾಸಕ ಶರಣು ಸಲಗರ ವಿತರಣೆ

ಬಡ ಕುಟುಂಬಗಳಿಗೆ ಆಹಾರಧಾನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಲಸೂರ: ಶಾಸಕ ಶರಣು ಸಲಗರ ಅವರು ಮಂಗಳವಾರ ಹುಲಸೂರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ದಿನಸಿ ಕಿಟ್‌ಗಳನ್ನು ವಿತರಿಸಿದರು.

ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳ ಗಾದ ತಾಲ್ಲೂಕಿನ ಮಿರಕಲ್, ಕೋಟಮಾಳ, ಅಂಬೇವಾಡಿ ಹಾಗೂ ಹಣಮಂತವಾಡಿ ಗ್ರಾಮಗಳಲ್ಲಿನ 1,400 ಹಾಗೂ ಬುಧವಾರ ಗೌರ ಗ್ರಾಮದ 550 ಬಡ ಕುಟುಂಬಗಳಿಗೆ ಶಾಸಕರು ವಿವಿಧ ದಿನಸಿ ಪದಾರ್ಥ ಗಳುಳ್ಳ ಕಿಟ್‍ಗಳನ್ನು ವಿತರಿಸಿದರು.

ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರಿಗೆ, ಬಡವರಿಗೆ ಹಾಗೂ ನಿರ್ಗತಿಕರಿಗೆ ನನ್ನಿಂದ ಸ್ವಲ್ಪ ಸಹಾಯವಾಗಲೆಂದು ಅವರಿಗೆ ದಿನಸಿ ಪದಾರ್ಥಗಳನ್ನು ವಿತರಿಸುತ್ತಿದ್ದೇನೆ. ಜನ ಕೋವಿಡ್‌ ನಿಯಮ ಪಾಲಿಸಿ ಲಾಕ್‍ಡೌನ್‌ ಯಶಸ್ವಿಗೊಳಿಸಬೇಕು ಎಂದು ಶರಣು ಸಲಗರ ಮನವಿ ಮಾಡಿದರು.

ಬಡವರು ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿರುವ ಇಂಥ ದಿನಗಳಲ್ಲಿ ಶಾಸಕ ಶರಣು ಸಲಗರ ಅವರು ತಮ್ಮ ಕೈಲಾದಷ್ಟು ಬಡವರಿಗೆ ದಿನಸಿ ವಿತರಿಸಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಸಂಗಮೇಶ್ ಭೋಪಳೆ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಧೀರ ಕಾಡಾದಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಜ್ಞಾನೋಬಾ ನಿಟ್ಟೂರೆ, ಶರದ್ ಶಿಂಧೆ, ಅಶೋಕ ಮೇತ್ರೆ, ಯುವರಾಜ ರನಮಲ್ಲೆ, ಸಂಗಮೇಶ ಭೋಪಳೆ, ದೇವಿಂದ್ರ ಭೋಪಳೆ, ಬಲವಂತ ವರವಟ್ಟೆ, ಪ್ರಭು ಶೆಟೆಪ್ಪ, ಪ್ರದೀಪ್ ಗಡವಂತೆ, ರಾಮು ಬಿರಾದಾರ, ರಾಜು ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು