ಶನಿವಾರ, ಏಪ್ರಿಲ್ 1, 2023
23 °C

ಕೋವಿಡ್ ಸುರಕ್ಷತಾ ಸಾಮಗ್ರಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ವಿದ್ಯಾನಿಕೇತನ ಹಾಗೂ ಅರಳು ಸಂಸ್ಥೆ ವತಿಯಿಂದ ಬೀದರ್ ತಾಲ್ಲೂಕಿನ 8 ಗ್ರಾಮಗಳ 160 ಮಂದಿ ಬಾಲ್ಯ ವಿವಾಹ ತಡೆ ಆಂದೋಲನ ನಾಯಕಿಯರಿಗೆ ಕೋವಿಡ್ ಸುರಕ್ಷತಾ ಸಾಮಗ್ರಿ ಕಿಟ್ ವಿತರಿಸಲಾಯಿತು.

ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣ (ಇಮೇಜ್) ಯೋಜನೆ ಅಡಿಯಲ್ಲಿ ಎರಡೂ ಸಂಸ್ಥೆಗಳ ಪ್ರತಿನಿಧಿಗಳು ಕಾಶೆಂಪೂರ್ (ಪಿ), ಮರ್ಜಾಪುರ (ಎಂ), ಕಂಗನಕೋಟ, ನೆಲವಾಡ, ಕಮಠಾಣ, ಯದಲಾಪುರ, ಅಯಾಸಪುರ ಹಾಗೂ ಅಷ್ಟೂರ ಗ್ರಾಮಗಳಲ್ಲಿ ಸ್ಯಾನಿಟೈಸರ್ ಬಾಟಲಿ, ಮಾಸ್ಕ್, ಸಾಬೂನು, ಟವೆಲ್‍ಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಿದರು.

ಪ್ರತಿಯೊಬ್ಬರೂ ಕೋವಿಡ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಸೋಂಕು ನಿರ್ಮೂಲನೆ ಆಗುವವರೆಗೂ ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಇಮೇಜ್ ಯೋಜನೆ ಜಿಲ್ಲಾ ಸಂಚಾಲಕ ಡಾ. ಕೆ.ಟಿ. ಮೆರಿಲ್ ಹೇಳಿದರು.

ಕೋವಿಡ್ ಸೋಂಕು ತಡೆಗೆ ನೆರವಾಗುವುದು ಸುರಕ್ಷತಾ ಸಾಮಗ್ರಿಗಳ ಕಿಟ್ ವಿತರಣೆ ಉದ್ದೇಶವಾಗಿದೆ. ಕೋವಿಡ್ ಕಾರಣ ವಿಧಿಸಲಾದ ಲಾಕ್‍ಡೌನ್‍ನಿಂದ ಅನೇಕ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆಗಳು ಕಂಡು ಬಂದಿದ್ದವು. ಹೀಗಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಹಾಲುಣಿಸುವ ತಾಯಂದಿರು ಹಾಗೂ ಗರ್ಭಿಣಿಯರಿಗೆ ಈಗಾಗಲೇ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗಿದೆ. ಕೋವಿಡ್ ವಾರಿಯರ್‍ಗಳಾದ ಆಶಾ ಕಾರ್ಯಕರ್ತೆಯರಿಗೂ ಸುರಕ್ಷತಾ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.

ಸ್ವಯಂ ಸೇವಕರಾದ ಸುನಿತಾ, ಯೋಹಾನ್, ಬಾಲ್ಯವಿವಾಹ ತಡೆ ಆಂದೋಲನದ ನಾಯಕಿಯರಾದ ಲಕ್ಷ್ಮಿ ನೆಲವಾಡ, ಪ್ರಿಯಂಕಾ ಮರ್ಜಾಪುರ, ಎಸ್ತೇರ್ ಕಾಶೆಂಪೂರ್, ಶ್ರೀದೇವಿ ಕಂಗನಕೋಟ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.