ಗುರುವಾರ , ಆಗಸ್ಟ್ 18, 2022
25 °C
ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ

‘ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಯುವಕರು, ವಿದ್ಯಾರ್ಥಿಗಳ ಪಾತ್ರ ಅತ್ಯಂತ ಹಿರಿದು’ ಎಂದು ಶಿವಾಜಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಪ್ರತಿಪಾದಿಸಿದರು.

ಪಟ್ಟಣದ ಶಿವಾಜಿ ಪಿಯು ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನವ ಸಂಪನ್ಮೂಲ ಜಗತ್ತಿನ ಬಹುದೊಡ್ಡ ಆಸ್ತಿಯಾಗಿದೆ. ಆದರೆ ಬಹುತೇಕರು ಮಾದಕ ವಸ್ತುಗಳಂಥ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯದ ಜತೆಗೆ ಸಾಮಾಜಿಕ ಸ್ವಾಸ್ಥ್ಯ ಕೂಡ ಹಾಳು ಮಾಡುತ್ತಿರುವುದು ಕಳವಕಾರಿ ಸಂಗತಿಯಾಗಿದೆ. ದುಶ್ಚಟಗಳಿಗೆ ಬಲಿಯಾದವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಸರಿದಾರಿಗೆ ತರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ,‘ಮಾದಕ ವಸ್ತುಗಳು ಸಮಾಜಕ್ಕೆ ಮಹಾ ಪಿಡುಗಾಗಿ ಕಾಡುತ್ತಿವೆ. ಅವುಗಳನ್ನು ಸಮಾಜದಿಂದ ನಿರ್ಮೂಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

ಕಿಸಾನ್ ಶಿಕ್ಷಣ ಪ್ರಸಾರಕ ಮಂಡಳ ಕೋಶಾಧ್ಯಕ್ಷ ಅಶೋಕರಾವ್ ಸೂರ್ಯವಂಶಿ, ರಾಹುಲ್ ಡಾಂಗೆ, ಅಮೃತ ಪಾಟೀಲ ಅವರು ಮಾತನಾಡಿದರು.

ಓ.ಆರ್.ಕಾಕನಾಳೆ, ಆರ್.ಎಂ.ಬಿರಾದಾರ, ಜ್ಯೋತಿ ಸವಾಳೆ, ಪ್ರಣಿತಾ ಠಿಗಳೆ, ಜಿ.ಟಿ.ಜಾಧವ, ಬಿ.ಎ.ಬಾಚಿಪಳ್ಳೆ, ಸಚ್ಚಿದಾನಂದ ಶೇಡೋಳೆ, ಸಂದೀಪ ಫುಲೆ, ಸಂಯೋಜಕರಾದ ಮಹಾನಂದಾ, ಸುನಿಲ್ ಸಂಗೋಳಗಿ ಇದ್ದರು. ಅರ್ಚನಾ ಸಾಳೊಂಕೆ ವಂದಿಸಿದರು. ಶೀಲಾ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು