ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಕ್ಕೆ 180 ಮೊಟ್ಟೆ ಸೇವಿಸಿ

ವಿಶ್ವ ಮೊಟ್ಟೆ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಪ್ರಕಾಶಕುಮಾರ ಹೇಳಿಕೆ
Last Updated 8 ಅಕ್ಟೋಬರ್ 2021, 13:58 IST
ಅಕ್ಷರ ಗಾತ್ರ

ಬೀದರ್: 'ಉತ್ತಮ ಸ್ವಾಸ್ಥ್ಯಕ್ಕಾಗಿ ವರ್ಷದಲ್ಲಿ 180 ಮೊಟ್ಟೆಗಳನ್ನು ಸೇವಿಸಬೇಕು' ಎಂದು ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ(ದೇವಣಿ)ದ ಮುಖ್ಯಸ್ಥ ಡಾ. ಪ್ರಕಾಶಕುಮಾರ ರಾಠೋಡ್ ಹೇಳಿದರು.

ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಸಮೀಪದ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ(ದೇವಣಿ)ದಲ್ಲಿ ಆಯೋಜಿಸಿದ್ದ ವಿಶ್ವ ಮೊಟ್ಟ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಸದ್ಯ ಸೇವಿಸುತ್ತಿರುವ ವಾರ್ಷಿಕ ಸರಾಸರಿ ಮೊಟ್ಟೆಗಳ ಸಂಖ್ಯೆ 86 ಮಾತ್ರ ಆಗಿದೆ' ಎಂದು ತಿಳಿಸಿದರು.

'ಮೊಟ್ಟೆ ಮಾನವನ ದೇಹಕ್ಕೆ ಅವಶ್ಯಕವಾದ 23 ಪೋಷಕಾಂಶಗಳನ್ನು ಹೊಂದಿದೆ. ತಾಯಿ ಹಾಲಿನ ನಂತರದ ಶ್ರೇಷ್ಠ ಸ್ಥಾನ ಅದಕ್ಕೆ ಇದೆ' ಎಂದು ತಿಳಿಸಿದರು.

'ದೈಹಿಕ ಬೆಳವಣಿಗೆಯಲ್ಲಿ ಮೊಟ್ಟೆ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ 1996 ರಲ್ಲಿ ಮೊಟ್ಟೆಗೆ ಉತ್ತೇಜನ ನೀಡಲು ವಿಶ್ವ ಮೊಟ್ಟೆ ದಿನ ಆಚರಣೆ ಆರಂಭಿಸಲಾಯಿತು. ಮೊಟ್ಟೆ ದಿನಾಚರಣೆಯು ಪ್ರಸಕ್ತ ವರ್ಷ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇದೆ' ಎಂದು ಹೇಳಿದರು.

'ಸಹಾಯಕ ಪ್ರಾಧ್ಯಾಪಕ ಡಾ. ವಿಜಯಕುಮಾರ ಎನ್. ಮಾತನಾಡಿ, ರೈತರು ಕೃಷಿ ಜತೆಗೆ ಕೋಳಿ ಸಾಕಾಣಿಕೆಯಂಥ ಉಪ ಕಸುಬು ಕೈಗೊಂಡಲ್ಲಿ ಆರ್ಥಿಕ ಪ್ರಗತಿ ಸಾಧಿಸಬಹುದು' ಎಂದು ಹೇಳಿದರು.

ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರದದಲ್ಲಿ ಇರುವ ವಿವಿಧ ಜಾನುವಾರು ನಿರ್ವಹಣಾ ಪದ್ಧತಿ ಹಾಗೂ ಮೇವು ತಳಿ ಕುರಿತು ಮಾಹಿತಿ ನೀಡಿದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್ ಪ್ರಾಯೋಜಿತ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಎರಡು ದಿನಗಳ ವೈಜ್ಞಾನಿಕ ಕೋಳಿ ಸಾಕಾಣಿಕೆ ಕುರಿತು ತರಬೇತಿ ಪಡೆದ ರೈತ ಮಹಿಳೆಯರಿಗೆ ಗಿರಿರಾಜ ಕೋಳಿ ಮರಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT