ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ: ಏಕತಾ ದಿವಸ ಆಚರಣೆ

Last Updated 1 ನವೆಂಬರ್ 2019, 16:04 IST
ಅಕ್ಷರ ಗಾತ್ರ

ಕಮಲನಗರ: ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಆಧುನಿಕ ಭಾರತ ನಿರ್ಮಾಣದಲ್ಲಿ ಅಗ್ರಗಣ್ಯ ನಾಯಕರು ಎಂದು ಸಾಹಿತಿ ಬಾ.ನಾ.ಸೊಲ್ಲಾಪುರೆ ಹೇಳಿದರು.

ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ವಾಚನಾಲಯದಲ್ಲಿ ಗುರುವಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 144ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯಕ್ಕಿಂತ ಹಿಂದೆ ಭಾರತದಲ್ಲಿ 562 ಸಂಸ್ಥಾನಗಳನ್ನು ಒಗ್ಗೂಡಿಸಿ, ಸಾರ್ವಭೌಮತೆ ಮತ್ತು ಅಖಂಡತೆಯನ್ನು ಎತ್ತಿಹಿಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ಪಿಡಿಒ ಪ್ರಭುದಾಸ ಜಾಧವ, ಅಂಕುಶ ರಜಪೂತ, ವೈಜಿನಾಥ ವಡ್ಡೆ, ಪ್ರವೀಣ ಕುಲಕರ್ಣಿ, ರಾಜಶೇಖರ ಅಜ್ಜಾ, ದಯಾನಂದ ವಡ್ಡೆ, ಮನೋಜ ಹಿರೇಮಠ, ಎಂ.ಎಚ್.ಪಾಟೀಲ ಹಾಗೂ ಎಸ್.ಎಸ್.ಸೂರ್ಯವಂಶಿ ಇತರರಿದ್ದರು.
ಸಂಗಮೇಶ ಮಾನಕರಿ ಸ್ವಾಗತಿಸಿದರು. ಮಹಾದೇವ ಸ್ವಾಮಿ ವಂದಿಸಿದರು. ರಮೇಶ ನಿರೂಪಣೆ ಮಾಡಿದರು.

ಖತಗಾಂವ: ಖತಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸರ್ದಾರ್ ಪಟೇಲ್‍ರ ಭಾವಚಿತ್ರಕ್ಕೆ ಎಸ್‍ಡಿಎಂಸಿ ಅಧ್ಯಕ್ಷ ಚನ್ನಬಸವ ಪಾಟೀಲ ಪೂಜೆ ಸಲ್ಲಿಸಿದರು.

ಮುಖ್ಯಗುರು ವಿಜಯಕುಮಾರ ಬಿರಾದಾರ ಮಾತನಾಡಿ,‘ಸರ್ದಾರ್ ಪಟೇಲ್‍ರ ಹೆಸರಿನಲ್ಲಿ ನಾವು ಆಚರಿಸುತ್ತಿರುವ ಮತ್ತು ಸ್ವೀಕರಿಸುತ್ತಿರುವ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯ ಮೂಕಲ ಬದ್ಧತೆ ತೋರಿಸಬೇಕು’ ಎಂದರು.

ಸೂರ್ಯಕಾಂತ ಮಹಾಜನ, ಶಿವಕುಮಾರ ಡೊಂಗರೆ, ಸಂಗೀತಾ ಬಿರಾದಾರ, ರೇಖಾ ಮಂಠೋಳೆ, ಸಂಗಮೇಶ ಧರಣೆ ಹಾಗೂ ದಿವ್ಯಾ ಪಾಟೀಲ ಇತರರಿದ್ದರು.

ಚಿಮ್ಮೆಗಾಂವ ವರದಿ: ಚಿಮ್ಮೆಗಾಂವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಗುರು ಉಷಾ ಚವ್ಹಾಣ್ ಸರ್ದಾರ್ ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಯಶವಂತ ಬಾರೋಳೆ, ಇಂದ್ರಜೀತ ಗವಳಿ, ನರಸಿಂಗ ಪಾಂಚಾಳ, ಆನಂದ ಪವಾರ್, ನಿರಂಜನ ಕೌಠೆ ಹಾಗೂ ಸುರೇಖಾ ಸೂರ್ಯವಂಶಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT