ಗುರುವಾರ , ಸೆಪ್ಟೆಂಬರ್ 23, 2021
21 °C
ಒಂದು ನಗರಸಭೆ, ಪಟ್ಟಣ ಪಂಚಾಯಿತಿ, ಮೂರು ಪುರಸಭೆಗೆ ಚುನಾವಣೆ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಧಿಸೂಚನೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ರಾಜ್ಯ ಚುನಾವಣಾ ಆಯೋಗವು ಗುರುವಾರ ಬೀದರ್ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಧಿಸೂಚನೆಯನ್ನು ಪ್ರಕಟಿಸಿದೆ.

ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಮೇ 20 ಕೊನೆಯ ದಿನವಾಗಿದೆ. ಮೇ 29ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಮೇ 31ರಂದು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಬಸವಕಲ್ಯಾಣ: ನಗರಸಭೆ ಒಟ್ಟು 31 ವಾರ್ಡ್‌ಗಳನ್ನು ಹೊಂದಿದೆ. ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ವಾರ್ಡ್ ಸಂಖ್ಯೆ 1ರಿಂದ 8ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದು.

ಬಸವಕಲ್ಯಾಣ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ವಾರ್ಡ್ 9ರಿಂದ 16ರವರೆಗೆ, ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಾರ್ಡ್ 17ರಿಂದ 24ರ ವರೆಗೆ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ 25ರಿಂದ 31ರ ವರೆಗಿನ ವಾರ್ಡ್‌ಗಳಲ್ಲಿ ಸ್ಪರ್ಧಿಸಬಯಸುವವರು ನಾಮಪತ್ರ ಸಲ್ಲಿಸಬಹುದು.

ಹುಮನಾಬಾದ್‌: ಹುಮನಾಬಾದ್‌ ಪುರಸಭೆ ವ್ಯಾಪ್ತಿಯಲ್ಲಿ 27 ವಾರ್ಡ್‌ಗಳಿವೆ. ಹುಮನಾಬಾದ್ ಪುರಸಭೆ ಕಾರ್ಯಾಲಯದಲ್ಲಿ ವಾರ್ಡ್ ಸಂಖ್ಯೆ 1ರಿಂದ 9ರ ವರೆಗೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ವಾರ್ಡ್ 10 ರಿಂದ 18ರವರೆಗೆ, ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಕಚೇರಿಯಲ್ಲಿ ವಾರ್ಡ್ 19ರಿಂದ 27ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ಚಿಟ್ಟಗುಪ್ಪ: ಚಿಟಗುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್‌ಗಳಿವೆ. ಚಿಟಗುಪ್ಪ ಪುರಸಭೆ ಕಚೇರಿಯ ಒಂದು ಕೊಠಡಿಯಲ್ಲಿ ವಾರ್ಡ್ 1ರಿಂದ 8ರ ವರೆಗೆ, ಇನ್ನೊಂದು ಕೊಠಡಿಯಲ್ಲಿ ವಾರ್ಡ್ 9ರಿಂದ 16ರ ವರೆಗೆ, ಚಿಟ್ಟಗುಪ್ಪ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ 17ರಿಂದ 23 ವಾರ್ಡ್‌ಗಳಿಂದ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ.

ಭಾಲ್ಕಿ: ಭಾಲ್ಕಿ ಪುರಸಭೆ ವ್ಯಾಪ್ತಿಯಲ್ಲಿ 27 ವಾರ್ಡ್‌ಗಳಿವೆ. ವಾರ್ಡ್ 1ರಿಂದ 9ರ ವರೆಗೆ ಭಾಲ್ಕಿ ತಾಲ್ಲೂಕು ಪಂಚಾಯಿತಿ ಸಮಿತಿ ಕಚೇರಿಯಲ್ಲಿ, ವಾರ್ಡ್ 10ರಿಂದ 18ರ ವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ, ವಾರ್ಡ್ 19ರಿಂದ 27ರ ವರೆಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಚೇರಿಯಲ್ಲಿ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.

ಔರಾದ್‌: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 20ವಾರ್ಡ್‌ಗಳಿವೆ. ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ, ವಾರ್ಡ್ 1ರಿಂದ 7ರ ವರೆಗೆ, ವಾರ್ಡ್ 8ರಿಂದ 14ರವರೆಗೆ ಹಾಗೂ ವಾರ್ಡ್ 15 ರಿಂದ 20ರ ವರೆಗೆ ಹೀಗೆ ಮೂರು ಚುನಾವಣಾಧಿಕಾರಿಗಳು ಪ್ರತ್ಯೇಕ ಕೊಠಡಿಗಳಲ್ಲಿ ನಾಮಪತ್ರ ಸ್ವೀಕರಿಸಲಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ
ಬಸವಕಲ್ಯಾಣ ನಗರಸಭೆ:
ವಾರ್ಡ್ ಸಂಖ್ಯೆ 1– ಹಿಂದುಳಿದ ವರ್ಗ(ಎ), 2–ಪರಿಶಿಷ್ಟ ಜಾತಿ ಮಹಿಳೆ, 3– ಸಾಮಾನ್ಯ, 4– ಹಿಂದುಳಿದ ವರ್ಗ(ಬಿ) ಮಹಿಳೆ, 5–ಸಾಮಾನ್ಯ, 6– ಹಿಂದುಳಿದ ವರ್ಗ(ಎ), 7– ಸಾಮಾನ್ಯ ಮಹಿಳೆ, 8–ಸಾಮಾನ್ಯ (ಮಹಿಳೆ), 9– ಸಾಮಾನ್ಯ, 10–ಹಿಂದುಳಿದ ವರ್ಗ(ಎ), 11– ಸಾಮಾನ್ಯ, 12– ಹಿಂದುಳಿದ ವರ್ಗ (ಎ), 13– ಸಾಮಾನ್ಯ ಮಹಿಳೆ, 14– ಪರಿಶಿಷ್ಟ ಜಾತಿ, 15– ಸಾಮಾನ್ಯ, 16– ಪರಿಶಿಷ್ಟ ಪಂಗಡ ಮಹಿಳೆ, 17– ಹಿಂದುಳಿದ ವರ್ಗ (ಎ) ಮಹಿಳೆ, 18– ಹಿಂದುಳಿದ ವರ್ಗ (ಬಿ), 19– ಹಿಂದುಳಿದ ವರ್ಗ(ಎ) ಮಹಿಳೆ, 20– ಸಾಮಾನ್ಯ ಮಹಿಳೆ, 21– ಪರಿಶಿಷ್ಟ ಪಂಗಡ, 22– ಸಾಮಾನ್ಯ, 23– ಪರಿಶಿಷ್ಟ ಜಾತಿ ಮಹಿಳೆ, 24– ಸಾಮಾನ್ಯ ಮಹಿಳೆ, 25– ಪರಿಶಿಷ್ಟ ಜಾತಿ, 26– ಹಿಂದುಳಿದ ವರ್ಗ(ಎ) ಮಹಿಳೆ, 27– ಸಾಮಾನ್ಯ, 28– ಸಾಮಾನ್ಯ ಮಹಿಳೆ, 29– ಸಾಮಾನ್ಯ ಮಹಿಳೆ, 30– ಸಾಮಾನ್ಯ ಮಹಿಳೆ, 31– ಸಾಮಾನ್ಯ.

ಹುಮನಾಬಾದ ಪುರಸಭೆ: ವಾರ್ಡ್ ಸಂಖ್ಯೆ 1– ಹಿಂದುಳಿದ ವರ್ಗ(ಎ) ಮಹಿಳೆ, 2– ಸಾಮಾನ್ಯ, 3– ಸಾಮಾನ್ಯ ಮಹಿಳೆ, 4–ಹಿಂದುಳಿದ ವರ್ಗ(ಎ), 5– ಹಿಂದುಳಿದ ವರ್ಗ(ಬಿ), 6– ಪರಿಶಿಷ್ಟ ಪಂಗಡ, 7– ಪರಿಶಿಷ್ಟ ಜಾತಿ, 8– ಸಾಮಾನ್ಯ ಮಹಿಳೆ, 9– ಹಿಂದುಳಿದ ವರ್ಗ(ಎ) ಮಹಿಳೆ, 10– ಹಿಂದುಳಿದ ವರ್ಗ(ಎ), 11– ಸಾಮಾನ್ಯ ಮಹಿಳೆ, 12– ಹಿಂದುಳಿದ ವರ್ಗ(ಎ), 13– ಸಾಮಾನ್ಯ, 14– ಹಿಂದುಳಿದ ವರ್ಗ(ಎ) ಮಹಿಳೆ, 15– ಸಾಮಾನ್ಯ, 16– ಸಾಮಾನ್ಯ, 17– ಸಾಮಾನ್ಯ, 18– ಸಾಮಾನ್ಯ, 19– ಪರಿಶಿಷ್ಟ ಪಂಗಡ ಮಹಿಳೆ, 20– ಸಾಮಾನ್ಯ ಮಹಿಳೆ, 21– ಪರಿಶಿಷ್ಟ ಜಾತಿ, 22– ಸಾಮಾನ್ಯ ಮಹಿಳೆ, 23– ಸಾಮಾನ್ಯ, 24– ಸಾಮಾನ್ಯ ಮಹಿಳೆ, 25– ಪರಿಶಿಷ್ಟ ಜಾತಿ ಮಹಿಳೆ, 26– ಪರಿಶಿಷ್ಟ ಜಾತಿ ಮಹಿಳೆ, 27– ಸಾಮಾನ್ಯ ಮಹಿಳೆ.

ಚಿಟ್ಟಗುಪ್ಪ ಪುರಸಭೆ: ವಾರ್ಡ್ ಸಂಖ್ಯೆ: 1– ಸಾಮಾನ್ಯ, 2– ಹಿಂದುಳಿದ ವರ್ಗ (ಎ) ಮಹಿಳೆ, 3– ಹಿಂದುಳಿದ ವರ್ಗ(ಬಿ) ಮಹಿಳೆ, 4– ಸಾಮಾನ್ಯ, 5– ಪರಿಶಿಷ್ಟ ಪಂಗಡ, 6– ಹಿಂದುಳಿದ ವರ್ಗ(ಎ), 7– ಸಾಮಾನ್ಯ ಮಹಿಳೆ, 8– ಸಾಮಾನ್ಯ ಮಹಿಳೆ, 9– ಹಿಂದುಳಿದ ವರ್ಗ(ಎ) ಮಹಿಳೆ, 10–ಸಾಮಾನ್ಯ, 11– ಸಾಮಾನ್ಯ, 12– ಹಿಂದುಳಿದ ವರ್ಗ(ಎ), (13) ಪರಿಶಿಷ್ಟ ಜಾತಿ, 14– ಸಾಮಾನ್ಯ ಮಹಿಳೆ, 15– ಹಿಂದುಳಿದ ವರ್ಗ(ಎ) ಮಹಿಳೆ, 16– ಸಾಮಾನ್ಯ ಮಹಿಳೆ, 17– ಹಿಂದುಳಿದ ವರ್ಗ(ಬಿ), 18– ಹಿಂದುಳಿದ ವರ್ಗ(ಎ), 19– ಸಾಮಾನ್ಯ, 20– ಸಾಮಾನ್ಯ, 21– ಸಾಮಾನ್ಯ ಮಹಿಳೆ, 22– ಪರಿಶಿಷ್ಟ ಜಾತಿ ಮಹಿಳೆ, 23– ಸಾಮಾನ್ಯ ಮಹಿಳೆ.

ಭಾಲ್ಕಿ ಪುರಸಭೆ: ವಾರ್ಡ್ ಸಂಖ್ಯೆ: 1– ಸಾಮಾನ್ಯ, 2– ಸಾಮಾನ್ಯ, 3– ಹಿಂದುಳಿದ ವರ್ಗ(ಎ), 4– ಹಿಂದುಳಿದ ವರ್ಗ(ಎ) ಮಹಿಳೆ, 5– ಸಾಮಾನ್ಯ ಮಹಿಳೆ, 6– ಪರಿಶಿಷ್ಟ ಜಾತಿ, 7 ಹಿಂದುಳಿದ ವರ್ಗ(ಬಿ), 8– ಸಾಮಾನ್ಯ ಮಹಿಳೆ, 9– ಸಾಮಾನ್ಯ, 10– ಹಿಂದುಳಿದ ವರ್ಗ(ಎ), 11– ಪರಿಶಿಷ್ಟ ಜಾತಿ, 12– ಹಿಂದುಳಿದ ವರ್ಗ(ಎ) ಮಹಿಳೆ, 13– ಸಾಮಾನ್ಯ, 14– ಸಾಮಾನ್ಯ ಮಹಿಳೆ, 15– ಪರಿಶಿಷ್ಟ ಜಾತಿ ಮಹಿಳೆ, 16– ಸಾಮಾನ್ಯ ಮಹಿಳೆ, 17– ಪರಿಶಿಷ್ಟ ಪಂಗಡ, 18– ಪರಿಶಿಷ್ಟ ಜಾತಿ, 19– ಪರಿಶಿಷ್ಟ ಜಾತಿ, 20– ಸಾಮಾನ್ಯ, 21– ಸಾಮಾನ್ಯ, 22– ಸಾಮಾನ್ಯ ಮಹಿಳೆ, 23– ಪರಿಶಿಷ್ಟ ಜಾತಿ ಮಹಿಳೆ, 24– ಸಾಮಾನ್ಯ ಮಹಿಳೆ, 25– ಸಾಮಾನ್ಯ, 26– ಸಾಮಾನ್ಯ ಮಹಿಳೆ, 27– ಪರಿಶಿಷ್ಟ ಜಾತಿ ಮಹಿಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.