ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ | ಕಸದ ತೊಟ್ಟಿಗಳಾದ ಖಾಲಿ ನಿವೇಶನ: ಸೊಳ್ಳೆಗಳ ಕಾಟ; ಜನರ ನೆಮ್ಮದಿಗೆ ಭಂಗ

ಗಣಪತಿ ಕುರನ್ನಳೆ
Published 18 ಡಿಸೆಂಬರ್ 2023, 5:42 IST
Last Updated 18 ಡಿಸೆಂಬರ್ 2023, 5:42 IST
ಅಕ್ಷರ ಗಾತ್ರ

ಕಮಲನಗರ: ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿನ ಗುರಪ್ಪಾ ಟೋಣ್ಣೆ ಶಾಲೆಗೆ ಹೊಗುವ ರಸ್ತೆ ಪಕ್ಕದ ನಿವೇಶನವು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ರಸ್ತೆಯ ಪಕ್ಕ ಎಲ್ಲೆಂದರಲ್ಲಿ ಬಿದ್ದ ಕಸ ಮೂಗು ಮುಚ್ಚಿಕೊಂಡು ಓಡಾಡುವಂತೆ ಮಾಡಿದೆ. ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿ ಆಗದಿರುವುದು ಇಲ್ಲಿಯ ಜನರ ನೆಮ್ಮದಿಗೆ ಭಂಗ ತಂದಿದೆ.

ಅಲ್ಲದೆ ಕಮಲನಗರದಿಂದ ಮುರ್ಗ(ಕೆ) ಗ್ರಾಮಕ್ಕೆ ಹೊಗುವ ರಸ್ತೆಯ ಹುಣಸೇ ಮರದ ಇರುವ ಮಠದ ಪಕ್ಕದಲ್ಲೇ ಕಸ ವಿಲೇವಾರಿ ಗುಂಡಿಗಳಿವೆ. ಕಮಲನಗರದ ಬಸವೇಶ್ವರ ವೃತ್ತ, ಹಾಗೂ ಹಲವು ಬಡಾವಣೆಗಳ ಜನರು ಪ್ರತಿ ದಿನ ವಾಯುವಿಹಾರಕ್ಕೆ ಈ ಕಡೆ ಹೋಗಿ ಬರುತ್ತಾರೆ. ಆದರೆ ಎಲ್ಲರೂ ಈ ಗಬ್ಬುವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.

ಮಠದ ಮುಂಭಾದಲ್ಲಿ ಅಂಚೆ ಕಚೇರಿಯ ನೀವೆಶನ ಖಾಲಿ ಇದೆ. ಮಹಾಜನ ಗಲ್ಲಿ, ಪೊಲೀಸ್ ಕ್ವಾಟ್ರಸ್, ಡಿಸಿಸಿ ಬ್ಯಾಂಕ್, ಕಮಲನಗರ ಪ್ರವಾಸಿ ಮಂದಿರ, ಹೀಗೆ ಹಲವಾರು ಕಡೆಗಳಿಂದ ಹರಿದು ಬರುವ ನಾಲೆಗಳ ನೀರು ಅಂಚೆ ಕಚೇರಿಯ ನೀವೆಶನದಲ್ಲಿ ಕಶ್ಮಲಗೊಂಡ ನೀರು ಸುಮಾರು ವರ್ಷಗಳಿಂದ ನಿಂತು ಕೆಟ್ಟವಾಸನೆ ಬರುತಿದೆ. ಇದರಿಂದ ಸಾರ್ವಜನಿಕರು ತೀವ್ರ ಮುಜಗರಕ್ಕೊಳಗಾಗುತ್ತಿದ್ದಾರೆ. ಅಂಚೆ ಕಚೇರಿಯ ನೀವೆಶನದಲ್ಲಿ ಬಹಳ ದಿನಗಳಿಂದ ಹೊಲಸು ನೀರು ಜಮೆಯಾಗುವುರಿಂದ ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ ವಿಪರೀತವಾಗುತ್ತಿದೆ.

ಹೊಲಸು ವಾಸನೆ ಎಲ್ಲೆಡೆ ಹರಡುತ್ತಿದೆ. ಆದರೂ ಕೂಡ ಗ್ರಾಮ ಪಂಚಾಯಿತಿಯವರು ನಮಗೂ ಇದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸುತ್ತಾರೆ.

ಕಮಲನಗರ ಗ್ರಾಮ ಪಂಚಾಯಿತಿಯಲ್ಲಿ ಕಸ ವಿಲೇವಾರಿ ವಾಹನಗಳು ಬಂದಿಲ್ಲ, ಆದ್ದರಿಂದ ಕಸ ವಿಲೇವಾರಿ ಮಾಡಲು ತೊಂದರೆ ಆಗುತ್ತಿದೆ. ಬೇರೆ ವ್ಯವಸ್ಥೆ ಮಾಡುತ್ತೇವೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಕೆಲವು ಬಡಾವಣೆಗಳಿಂದಲೂ ಬಚ್ಚಲ ನೀರು ಹರಿದುಕೊಂಡು ಬಂದು ಜಮೆ ಆಗುತ್ತಿವೆ. ನಿವೇಶನ ಇದ್ದುದರಿಂದ ನೀರು ಮುಂದೆ ಹೋಗುತ್ತಿಲ್ಲ. ವಾಸನೆಯಿಂದ ಚಿಕ್ಕ ಮಕ್ಕಳ ಆರೋಗ್ಯ ಕೆಡಬಹುದೆಂಬ ಭಯವಿದೆ
ಇಲಾಯಿ ಬಾಗವಾನ್ ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT