ಪರಿಸರ ರಕ್ಷಣೆ ಎಲ್ಲರ ಹೊಣೆ: ಗುಂಡಪ್ಪ ಹುಡಗೆ

ಚಿಟಗುಪ್ಪ: ‘ಎಲ್ಲ ಜೀವರಾಶಿಗಳ ಉಳಿವಿಗೆ ಸುತ್ತಲಿನ ಗಿಡ, ಮರ, ಗಾಳಿ, ನೀರು ಒಳಗೊಂಡ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲೆ ಇದೆ’ ಎಂದು ವಿಜ್ಞಾನ ಪರಿವೀಕ್ಷಕ ಗುಂಡಪ್ಪ ಹುಡಗೆ ಹೇಳಿದರು.
ತಾಲ್ಲೂಕಿನ ಬೆಳಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ (ಇಕೊಕ್ಲಬ್) ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಮಹಾರುದ್ರಪ್ಪ ಅಣದೂರ ಮಾತನಾಡಿ, ‘ಪರಿಸರದ ನಾಶ ಮತ್ತು ಕಲ್ಮಷಕ್ಕೆ ಮಾನವ ಕಾರಣವಾಗಿದ್ದು, ಇದರ ಸಂರಕ್ಷಣೆಗೂ ಮಾನವ ಕಾರಣವಾಗಬೇಕು’ ಎಂದು ಹೇಳಿದರು.
ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಉಮಾದೇವಿ, ನಾಗವೇಣಿ ಅವರಿಗೆ ಬೇಳಕೇರಾದ ಚಂದ್ರಕಾಂತ ಕೊರಿ ವೈಯಕ್ತಿಕವಾಗಿ ಸನ್ಮಾನಿಸಿ ಕಾಣಿಕೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸಂಗ್ರಾಮಪ್ಪಾ ಬುಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ, ಗಣ್ಯರಾದ ವಿಕ್ಟರ್, ಲತಾ, ದಿಲೀಪಕುಮಾರ ಇದ್ದರು. ಮುಖ್ಯಗುರು ಅಂಬ್ಲೆ ಬಾಬುರಾವ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುನಂದಾ ಪ್ರಾಸ್ತಾವಿಕ ಮಾತನಾಡಿದರು. ಅನಿಲ ಕುಮಾರ ಸಿರಮುಂಡಿ ನಿರೂಪಿ ಸಿದರು. ಶ್ರೀನಾಥ ಸ್ವಾಗತಿಸಿದರು. ನಿಂಗಪ್ಪ ದೊಡ್ಡಮನಿ ವಂದಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.