ಸಾಮಾಜಿಕ ನ್ಯಾಯ ಬಸವತತ್ವಕ್ಕೆ ನಿಷ್ಠರಾಗಿರುವ ಈಶ್ವರ ಬಿ. ಖಂಡ್ರೆ ಅವರನ್ನು ಮಹಾಸಭಾದ ಜವಾಬ್ದಾರಿ ವಹಿಸಿರುವುದು ಸಂತಸದ ವಿಷಯ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಅವರ ನಾಯಕತ್ವದ ಮೇಲಿರುವ ವಿಶ್ವಾಸವೇ ಸಾಕ್ಷಿ
ಬಸವರಾಜ ಜಾಬಶೆಟ್ಟಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆ
ಭೀಮಣ್ಣ ಖಂಡ್ರೆ ಅವರ ನಂತರ ಈಶ್ವರ ಬಿ. ಖಂಡ್ರೆ ಅವರಿಗೆ ಮಹಾಸಭಾ ಅಧ್ಯಕ್ಷರಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅವರ ನಾಯಕತ್ವದಲ್ಲಿ ಮಹಾಸಭಾ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಭರವಸೆ ಇದೆ.
ವಿಜಯಕುಮಾರ ಗೌರೆ ಹಿರಿಯ ಕಾರ್ಯಕಾರಿಣಿ ಸದಸ್ಯ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭೆ