ಕಮಲನಗರ: ರಾಜ್ಯದಲ್ಲಿ ವಾಸವಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶ ಬಿಡುವಂತೆ ಆದೇಶ ನೀಡಿದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಕುರಿತು ಕಮಲನಗರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಮನವಿಯನ್ನು ಶಿರೇಸ್ತೆದಾರ ಅಶ್ವಿನ ಪಾಟೀಲ ಅವರಿಗೆ ಸಲ್ಲಿಸಿದರು.

ಕಾಶ್ಮೀರದ ಪೆಹಲ್ಗಾಮ್ನಲ್ಲಿ ಪಾಕಿಸ್ತಾನಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ಹತ್ಯೆ ವಿರುದ್ದ ಪ್ರತೀಕಾರ ತೀರಿಸಿಕೊಳ್ಳಲು ಮತ್ತು ಉಗ್ರರ ನಿರ್ನಾಮಕ್ಕೆ ಮುಂದಾದ ಕೇಂದ್ರ ಸರ್ಕಾರ 48 ಗಂಟೆಯೊಳಗೆ ಕರ್ನಾಟಕ ರಾಜ್ಯದಲ್ಲಿ ವಾಸವಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶ ಬಿಡುವಂತೆ ಆದೇಶ ನೀಡಲಾಗಿದೆ. ಆದರೆ, ರಾಜ್ಯ ಸರ್ಕಾರ ಮೃದು ಧೋರಣೆ ತಾಳಿದ್ದು, ಇನ್ನು ಕೆಲ ಪಾಕಿಸ್ತಾನಿ ಪ್ರಜೆಗಳು ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ರಾಜ್ಯ ಸರ್ಕಾರ ಪಾಕಿಸ್ತಾನಿ ಪ್ರಜೆಗಳನ್ನು ದೇಶ ಬಿಟ್ಟು ಹೋಗುವಂತೆ ಖಡಕ್ ಆದೇಶ ನೀಡಬೇಕು ಮತ್ತು ಕೇಂದ್ರ ಸರ್ಕಾರದ ನೀತಿಗೆ ಎಲ್ಲರು ಒಗ್ಗಟ್ಟಿನಿಂದ ಬೆಂಬಲಿಸಬೇಕು. ಹೀಗಾಗಿ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈಜಿನಾಥ ಗುಡ್ಡಾ, ಬಾಲಾಜಿ ತೆಲಂಗ್, ಸಂತೋಷ ಸಂಗಮೆ, ಶಿವೂ ಜುಲ್ಪೆ, ಶಿವಾನಂದ ವಡ್ಡೆ, ಬಾಲಾಜಿ ಬಿರಾದಾರ, ಶಿವೂ ಮಹಾಜನ, ಶಿವಕುಮಾರ ಬಿರಾದಾರ, ಅನೀಲಕುಮಾರ ಬಿರಾದಾರ, ಶರಣಪ್ಪ ದಾನಾ, ಎಸ್ ಎನ್ ಶಿವಣಕರ್, ರಾಜಕುಮಾರ ಗಾಯಕವಾಡ, ಪ್ರಶಾಂತ ಖಾನಾಪೂರೆ, ಬಂಟಿ ರಾಂಪೂರೆ, ಮಾಧವರಾವ ಚಾಂಗೋಣೆ, ದಯಾನಂದ ರಾಜೋಳೆ, ಮಲ್ಲಿಕಾರ್ಜುನ ಬಿರಾದಾರ, ಚಂದ್ರಕಾಂತ ಸಂಗಮೆ, ರಂಗರಾವ ಜಾಧವ ಹಾಗೂ ಇನ್ನಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.