ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ | ಹಿಂದು ತಾಯಂದಿರಿಗೆ ಉಡಿ ತುಂಬಿದ ಮುಸ್ಲಿಂ ಕುಟುಂಬ

ಪ್ರತಿ ವರ್ಷ ತಾಯಂದಿರ ದಿನಾಚರಣೆ
Last Updated 9 ಮೇ 2022, 9:03 IST
ಅಕ್ಷರ ಗಾತ್ರ

ಔರಾದ್: ವಿಶ್ವ ತಾಯಂದಿರ ದಿನದ ಪ್ರಯುಕ್ತ ತಾಲ್ಲೂಕಿನ ವಡಗಾಂವ್ ಗ್ರಾಮದಲ್ಲಿ ಭಾನುವಾರ ಮುಸ್ಲಿಂ ಕುಟುಂಬವು ಹಿಂದೂ ಮಾತೆಯರ ಉಡಿ ತುಂಬಿ ಗೌರವಿಸಿತು.

ಯಾದಗಿರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾದ ಖಾಜಾ ಖಲೀಲುಲ್ಲ ಮತ್ತು ಅವರ ತಾಯಿ ನಸೀಮಾ ಬೇಗಂ ಅವರು
ತಾವು ವಾಸಿಸುವ ಹರಳಯ್ಯ ಬಡಾವಣೆಯ 15 ಹಿಂದೂ ಮಹಿಳೆಯರನ್ನು ಆಹ್ವಾನಿಸಿ, ಗೌರವಿಸಿದರು. ಕೇಕ್ ಕತ್ತರಿಸಿ, ಸಂಭ್ರಮಿಸಿದರು.

‘ನನಗೆ ಜನ್ಮ ನೀಡಿದ ತಾಯಿ ಮುಸ್ಲಿಂ. ಆದರೆ, ನನ್ನ ಬಾಳಿಗೆ ಬೆಳಕಾದವರು ಸಾಕು ತಾಯಿ ಲತಾ ದಂಡೆ. ಹೀಗಾಗಿ ಪ್ರತಿ ವರ್ಷ ಅವರ ಮೇಲಿನ ಅಭಿಮಾನದಿಂದ ನಮ್ಮ ಗೆಳೆಯರ ಬಳಗದಿಂದ ತಾಯಂದಿರ ದಿನ ಆಚರಿಸಿ, ಬಡಾವಣೆ ಮಹಿಳೆಯರನ್ನು ಗೌರವಿಸುತ್ತೇವೆ’ ಎಂದು ಖಾಜಾ ಖಲಿಲುಲ್ಲ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಹಿತಿ ಡಾ.ರೇಣುಕಾ ಸ್ವಾಮಿ, ಡಾ. ಸಿದ್ದಾರೆಡ್ಡಿ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ ಫುಲೆ, ಅಮರೇಶ ಮಡಿವಾಳ, ಓಂಕಾರ ಮೇತ್ರೆ, ರವಿ ಸ್ವಾಮಿ, ಅಯೂಬಖಾನ್, ಶಫಿಯುಲ್ಲ, ಆಕಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT