ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರ್ಟ್‌ ಸರ್ಕಿಟ್‌: ಹೊತ್ತಿ ಉರಿದ ಗಾದಿ ತಯಾರಿಕೆ ಅಂಗಡಿ,

ವಸ್ತುಗಳು ಬೆಂಕಿಗೆ ಆಹುತಿ
Last Updated 19 ಫೆಬ್ರುವರಿ 2021, 3:34 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣದ ಉಪನ್ಯಾಸಕರ ಬಡಾವಣೆ ರಸ್ತೆಯ ಶೇಕ್ ಅಲಿಯೋದ್ದಿನ್‌ ಅವರಿಗೆ ಸೇರಿದ ಕರ್ನಾಟಕ ಎಂಟರ್ ಪ್ರೈಸೆಸ್ (ಗಾದಿ ತಯಾರಿಕೆ) ಅಂಗಡಿ ಗುರುವಾರ ಅಗ್ನಿ ಅವಘಡಕ್ಕೆ ಧಗಧಗನೇ ಹೊತ್ತಿ ಉರಿದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ ಆಗಿವೆ.

ಅಂಗಡಿಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಸಣ್ಣ ಕಿಡಿ ಕಾಣಿಸಿಕೊಂಡಿದೆ. ಬೆಂಕಿ ವೇಗ ಪಡೆದು ಅಂಗಡಿಪೂರ್ತಿ ಆವರಿಸಿದೆ. ವಿಷಯ ತಿಳಿದು ಅಗ್ನಿಶಾಮಕ ದಳ ಬರುವಷ್ಟರಲ್ಲಿಯೇ ಅಂಗಡಿಯಲ್ಲಿನ ಗಾದಿ ತಯಾರಿಕೆಯ ಹತ್ತಿ, ಬೆಡ್‍ಶೀಟ್, ಫರ್ನಿಚರ್, ಕಾಟನ್ ಸಾಮಗ್ರಿ ಸೇರಿ ಮತ್ತಿತರ ವಸ್ತುಗಳು ಸುಟ್ಟು ಭಸ್ಮ ಆಗಿದ್ದು, ಸುಮಾರು ₹14 ಲಕ್ಷ ಹಾನಿ ಸಂಭವಿಸಿರಬಹುದು ಎಂದು ಅಂಗಡಿ ಮಾಲೀಕ ಅಂದಾಜಿಸಿದ್ದಾರೆ.

ಬೆಂಕಿಯ ತೀವ್ರತೆ ಪಕ್ಕದ ಅಂಗಡಿಗೆ ವ್ಯಾಪಿಸುವ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ವಿಷ್ಣುಕುಮಾರ್, ಸಂಜೀವಕುಮಾರ್, ರಾಜಕುಮಾರ್, ರಾಮರತನ ರೆಡ್ಡಿ, ವೀರಶೆಟ್ಟಿ, ವೀರಯ್ಯ ಸ್ವಾಮಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಈ ಕುರಿತು ನಗರ ಪೊಲೀಸ್‌ ಠಾಣೆ, ಅಗ್ನಿ ಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT