ಗ್ರಾಹಕರ ಅಚ್ಚುಮೆಚ್ಚಿನ ಬೆಣ್ಣೆ ದೋಸೆ

ಭಾನುವಾರ, ಮೇ 26, 2019
30 °C

ಗ್ರಾಹಕರ ಅಚ್ಚುಮೆಚ್ಚಿನ ಬೆಣ್ಣೆ ದೋಸೆ

Published:
Updated:
Prajavani

ಭಾಲ್ಕಿ: ಇಲ್ಲಿಯ ಮಹಾತ್ಮಗಾಂಧಿ ವೃತ್ತ ಸಮೀಪದ ಆಂಧ್ರ ಟಿಫಿನ್ ಸೆಂಟರ್ ಉಪಾಹಾರಕ್ಕೆ ಪ್ರಸಿದ್ಧಿ ಪಡೆದಿದ್ದು, ದಿನದಿಂದ ದಿನಕ್ಕೆ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ.

ಬೆಳಿಗ್ಗೆ ಉಪಾಹಾರ ಮಾಡಬೇಕು ಎನಿಸಿದಾಗ ಸರ್ಕಾರಿ ನೌಕರಸ್ಥರಿಗೆ, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರಿಗೆ ಇವರ ಉಪಾಹಾರಗೃಹ ನೆನಪಾಗುತ್ತದೆ.

ಸುಮಾರು 5 ವರ್ಷಗಳಿಂದ ಉಪಾಹಾರ ಗೃಹ ನಡೆಸುತ್ತಿದ್ದೇವೆ. ಉಪಾಹಾರದಲ್ಲಿ ಮನೆಯಂತೆಯೇ ಇಡ್ಲಿ, ವಡಾ, ಮೈಸೂರ ಭಾಜಿ, ಮಸಾಲೆ ದೋಸೆ, ಸಾದಾ ದೋಸೆ ಸಿದ್ಧಪಡಿಸುತ್ತೇವೆ. ಆದರೆ, ಬೆಣ್ಣೆ ದೋಸೆ ಬಹುಜನರ ಬೇಡಿಕೆಯ ಉಪಾಹಾರ. ಉತ್ತಮ ಗುಣಮಟ್ಟದ ಶುದ್ಧ ಎಣ್ಣೆ, ಹಿಟ್ಟು, ಬೆಣ್ಣೆ, ಈರುಳ್ಳಿ, ಕೊತ್ತಂಬರಿ, ಮಸಾಲೆ ಬಳಸಿ ಸ್ವಾದಿಷ್ಟ ದೋಸೆ ತಯಾರಿಸುತ್ತೇವೆ. ಅದರೊಂದಿಗೆ ರುಚಿಕರ ಶೇಂಗಾ ಚಟ್ನಿ, ತಾಜಾ ತರಕಾರಿ ಬಳಸಿ ಮಾಡುವ ಸಾಂಬಾರ ನೀಡುತ್ತೇವೆ. ಇದರಿಂದ ಗ್ರಾಹಕರಿಗೆ ಇನ್ನು ಸ್ವಲ್ಪ ಹೆಚ್ಚಿಗೆ ಉಪಹಾರ ತಿನ್ನಬೇಕು ಅನಿಸುತ್ತದೆ ಎಂದು ಮಾಲೀಕ ಮುಕೇಶ ವಿಠಲರಾವ್ ತಿಳಿಸುತ್ತಾರೆ.

ಹೆಚ್ಚು ಹಣ ಗಳಿಸಬೇಕು ಎಂಬುದು ನಮ್ಮ ಮೂಲ ಉದ್ದೇಶ ಇಲ್ಲ. ನಮ್ಮ ಟಿಫಿನ್ ಸೆಂಟರ್‌ಗೆ ಬರುವ ಪ್ರತಿಯೊಬ್ಬರು ಚೆನ್ನಾಗಿ ಉಪಾಹಾರ ಸೇವಿಸಿ ಆನಂದ ಅನುಭವಿಸಬೇಕು ಎಂಬುದೇ ನಮಗೆ ಮುಖ್ಯ. ಅವರ ಶುಭ ಹಾರೈಕೆ, ಹಣದಿಂದ ಸಿಗುವ ಆನಂದಕ್ಕಿಂತ ಮಿಗಿಲಾದದ್ದು ಎನ್ನುತ್ತಾರೆ ಸಹೋದರರಾದ ಹಣಮಂತ, ಪುಂಡಲೀಕ.

ಯಶಸ್ವಿಯಾಗಿ ಹೊಟೇಲ್ ಉದ್ಯಮ ನಡೆಸಲು ನನ್ನ ಸಹೋದರರು ನೌಕರರು ನನಗೆ ಸಹಕಾರ ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹೊಟೇಲ್‍ನ್ನು ಮೇಲ್ದರ್ಜೆಗೇರಿಸುವ ಚಿಂತನೆ ಇದೆ ಎಂದು ಭವಿಷ್ಯದ ಕನಸನ್ನು ಮಾಲೀಕ ಮುಕೇಶ ವಿಠಲರಾವ್ ಬಿಚ್ಚಿಡುತ್ತಾರೆ.

*
ಮನೆಯಂತೆ ರುಚಿಕರವಾಗಿ ಉಪಾಹಾರ ಸಿದ್ಧಪಡಿಸುತ್ತಾರೆ. ಬೆಣ್ಣೆ ದೋಸೆ ಒಂದು ಸಾರಿ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.
-ಪ್ರವೀಣ ಖಂಡಾಳೆ, ಗ್ರಾಹಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !