ಜನವಾಡ (ಬೀದರ್ ಜಿಲ್ಲೆ): ಬೀದರ್ ತಾಲ್ಲೂಕಿನ ಕಂಗಟಿ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿದ್ದಾರೆ. ಮೂವರ ಶವ ದೊರೆಕಿದ್ದು, ಬಾಲಕನ ಶೋಧ ಕಾರ್ಯ ಮುಂದುವರಿದಿದೆ.

ಕಂಗಟಿ ಗ್ರಾಮದ ಆನಂದಾ ಸಂಜುಕುಮಾರ ಪರೀಟ (30), ಪ್ರಜ್ವಲ್ ಸಂಜುಕುಮಾರ ಪರೀಟ (12) ಹಾಗೂ ಸುನೀತಾ ಮಂಜುಕುಮಾರ ಪರೀಟ (25) ಶವಗಳು ದೊರೆಕಿವೆ. ನಾಗಶೆಟ್ಟಿ ಮಂಜುಕುಮಾರ ಪರೀಟ (10) ಅವರಿಗಾಗಿ ಹುಡುಕಾಟ ನಡೆದಿದೆ.

ಆನಂದಾ ಹಾಗೂ ಸುನೀತಾ ಬಟ್ಟೆ ತೊಳೆಯಲು ಹೋದಾಗ ಮಕ್ಕಳು ಈಜಲು ನೀರಿಗೆ ಇಳಿದ ಸಂದರ್ಭದಲ್ಲಿ ಕೆಸರಿನಲ್ಲಿ ಸಿಕ್ಕಿಕೊಂದ್ದರು. ಅವರನ್ನು ಮೇಲಕ್ಕೆತ್ತಲು ಹೋದ ತಾಯಂದಿರೂ ನೀರು ಪಾಲಾಗಿದ್ದಾರೆ. ಜನವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಳುಗು ತಜ್ಞರನ್ನು ಕರೆಸಿ ಶವಗಳ ಶೋಧ ಕಾರ್ಯ ನಡೆಸಿದರು. ಮೂವರ ಶವ ಸಂಜೆ ಪತ್ತೆಯಾಗಿದೆ. ತಡ ರಾತ್ರಿಯ ವರೆಗೂ ಬಾಲಕ ಪತ್ತೆಯಾಗಿಲ್ಲ.

ನವರಾತ್ರಿಯ ಸಂದರ್ಭದಲ್ಲಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.