ಮಂಗಳವಾರ, ಜೂನ್ 22, 2021
22 °C

ಖೇಣಿ ಅಭಿಮಾನಿಗಳಿಂದ ಉಚಿತ ಔಷಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಕೋವಿಡ್ ಸೋಂಕಿಗೆ ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಶೋಕ ಖೇಣಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಉಚಿತ ಔಷಧಿ ವಿತರಿಸಿದರು.

ಮೊಬೈಲ್ ಸಂಖ್ಯೆಗೆ ಕರೆ ಮಾಡಿದವರ ಮನೆ ಬಾಗಿಲಿಗೇ ಹೋಗಿ ಔಷಧಿ ಕೊಟ್ಟರು.

‘ಕೋವಿಡ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕರು ಸಾವಿಗೀಡಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಶಾಸಕ ಅಶೋಕ ಖೇಣಿ ಅವರ ಹೆಸರಲ್ಲಿ ಯುವಕರ ತಂಡವೊಂದು ಸೋಂಕಿತರ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ’ ಎಂದು ಶಿವಪುತ್ರಪ್ಪ ಕುಂಬಾರ ಹೇಳಿದರು.

‘ಕೋವಿಡ್ ಪ್ರಯುಕ್ತ ವಿಧಿಸಲಾಗಿದ್ದ ಲಾಕ್‍ಡೌನ್ ಸಂದರ್ಭದಲ್ಲಿ ಅಶೋಕ ಖೇಣಿ ಅವರು ನಿರ್ಗತಿಕರಿಗೆ ಆಹಾರ ಕಿಟ್ ಹಾಗೂ ತರಕಾರಿ ವಿತರಿಸಿದ್ದರು’ ಎಂದು ಸ್ಮರಿಸಿದರು.

ಅಶೋಕ ಖೇಣಿ ಅಭಿಮಾನಿಗಳ ಸಂಘದ ಸದಸ್ಯರಾದ ರಮೇಶ ಹೌದಖಾನಿ, ಪ್ರಶಾಂತ ಜೈನ್, ಓಂಕಾರ ಕೊಡ್ಡಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.