ಮಂಗಳವಾರ, ಜೂನ್ 28, 2022
26 °C
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮನವಿ

ಕೊರೊನಾ ಹೋಗಲಾಡಿಸಲು ಸಹಕರಿಸಿ: ಪ್ರಭು ಚವಾಣ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಅಬ್ಬರ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಮರಣದ ಪ್ರಮಾಣವೂ ಇಳಿಕೆಯಾಗಿದೆ. ಹೀಗಂತ ಯಾರು ಮೈಮರೆಯದೇ ಕೋವಿಡ್ ಮಾರ್ಗಸೂಚಿ ಪಾಲಿಸಿ, ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಕೋವಿಡ್ ಪರಿಶೀಲನೆ ಮತ್ತು ಜಾಗೃತಿ ನಿಮಿತ್ತ ಇಲ್ಲಿನ ಗ್ರಾಮ ಪಂಚಾ ಯಿತಿಗೆ ಗುರುವಾರ ಭೇಟಿ ನೀಡಿದ ಅವರು, ‘ಪ್ರತಿ ಗ್ರಾಮದಲ್ಲೂ ಪಿಡಿಒ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದರು.

ಜಿಪಂ ಸಿಇಒ ಜಹೀರಾ ನಸೀಮ್, ತಹಶೀಲ್ದಾರ್ ರಮೇಶ ಪೆದ್ದೆ, ತಾ.ಪಂ ಇಒ ಮಾಣಿಕರಾವ ಪಾಟೀಲ, ಡಿವೈಎಸ್‍ಪಿ ಡಾ.ದೇವರಾಜ, ಟಿಎಚ್‍ಒ ಶರಣಯ್ಯ ಸ್ವಾಮಿ, ತಾ.ಪಂ ಅಧ್ಯಕ್ಷ ಗಿರೀಶ ಒಡೆಯರ್, ಗ್ರಾ.ಪಂ ಅಧ್ಯಕ್ಷ ಶಿವಕುಮಾರ ಜುಲ್ಪೆ, ಮುಖಂಡ ಬಂಡೆಪ್ಪಾ ಕಂಟೆ, ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಸುರೇಶ ಭೋಸ್ಲೆ, ಶಿವಾನಂದ ವಡ್ಡೆ, ಬಾಲಾಜಿ ತೇಲಂಗ್, ಪಿಡಿಒ ರಾಜಕುಮಾರ ತಂಬಾಕೆ, ದಿಲೀಪ ಚವಾಣ್, ಪ್ರಶಾಂತ ಜಾಧವ, ಸುರೇಶ ಭೋಸ್ಲೆ, ಸತೀಶ ಪಾಟೀಲ ಇದ್ದರು.

ತಾಲೂಕಿನ ಚಿಕ್ಲಿ (ಯು), ಗಂಗನಬೀಡ, ಚಿಮ್ಮೇಗಾಂವ, ದಾಬಕಾ, ಮುರ್ಕಿ, ಮದನೂರ, ಡೋಣಗಾಂವ್, ಸೋನಾಳ, ಖೇಡ, ಹೊಳಸಮುದ್ರ, ಡಿಗ್ಗಿ ಗ್ರಾಮಗಳಿಗೆ ಭೇಟಿ ನೀಡಿದ ಸಚಿವರು ಕೋವಿಡ್ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು