ಮಂಗಳವಾರ, ಸೆಪ್ಟೆಂಬರ್ 28, 2021
25 °C
ಜಿಜಾಮಾತಾ ಶಾಲೆಯಲ್ಲಿ ಶಿಕ್ಷಕರ ದಿನ ವಿಶಿಷ್ಟ ಆಚರಣೆ

ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಬೀದರ್: ಇಲ್ಲಿಯ ಜಿಜಾಮಾತಾ ಶಾಲೆಯಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸಿದರು.

ಶಿಕ್ಷಕರಿಗೆ ಹೂ ಮಾಲೆ ಹಾಕಿ ಶುಭ ಕೋರಿದ ವಿದ್ಯಾರ್ಥಿಗಳು ಉಡುಗೊರೆ ರೂಪದಲ್ಲಿ ಪೆನ್ನು, ಡೈರಿಗಳನ್ನು ನೀಡಿದರು. ಅನೇಕ ವಿದ್ಯಾರ್ಥಿಗಳು, ವ್ಯಕ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಕುರಿತು ಅನಿಸಿಕೆ ವ್ಯಕ್ತಪಡಿಸಿ ಗಮನ ಸೆಳೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಜಾಮಾತಾ ಕನ್ಯಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ಅವರು, ಗುರು-ಶಿಷ್ಯ ಸಂಬಂಧ ಬಹಳ ಪವಿತ್ರವಾದದ್ದು. ಅದನ್ನು ಶಬ್ದಗಳಲ್ಲಿ ವರ್ಣಿಸಲು ಆಗದು ಎಂದು ಹೇಳಿದರು.

ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರನ್ನು ಇಡೀ ದೇಶವೇ ಗೌರವಿಸಲು ಅವರ ವ್ಯಕ್ತಿತ್ವವೇ ಕಾರಣ. ಅವರು ಆದರ್ಶ ಗುರುವಾಗಿದ್ದರು. ಶಿಕ್ಷಕರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶಾಲೆಯಲ್ಲಿ 6 ರಿಂದ 10ನೇ ವರೆಗೆ ಭೌತಿಕ ತರಗತಿಗಳು ಆರಂಭಗೊಂಡಿವೆ. ಕೋವಿಡ್ ಕಾರಣ ವಿದ್ಯಾರ್ಥಿಗಳು ತಪ್ಪದೇ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಜಾಮಾತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬೆಂಬುಳಗೆ, ಜಿಜಾಮಾತಾ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವಾಸುದೇವ ರಾಠೋಡ್ ಮಾತನಾಡಿದರು.

ತಾಲ್ಲೂಕುಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಆನಂದ ಜಾಧವ್ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ರಾಜಕುಮಾರ ಗಾದಗೆ, ಸಂಜಯ ಪಾಟೀಲ, ಬಸವರಾಜ, ಅರ್ಜುನ, ತಾನಾಜಿ ನಿರಗುಡೆ, ವಿವೇಕ, ಕುಮಾರಸ್ವಾಮಿ, ಧರ್ಮಪ್ರಕಾಶ ಇದ್ದರು.

ಅಂಬಾದಾಸ ಜಾನಾಪೂರೆ ಸ್ವಾಗತಿಸಿದರು. ಭೀಮಷಾ ಈರಣ್ಣ ನಿರೂಪಿಸಿದರು. ಮೋಹನ್ ಜೋಶಿ ವಂದಿಸಿದರು.

ಶಿವ ಛತ್ರಪತಿ ಸ್ಮಾರಕ ಸಮಿತಿ ಸಂಚಾಲಿತ ಜಿಜಾಮಾತಾ ಕನ್ಯಾ ಪ್ರೌಢಶಾಲೆ, ಜಿಜಾಮಾತಾ ಪ್ರೌಢಶಾಲೆ ಹಾಗೂ ಜಿಜಾಮಾತಾ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.