ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಜ್ಞಾನಸುಧಾ ಶಾಲೆಯ 6 ಮಕ್ಕಳಿಗೆ ಅಗ್ರಶ್ರೇಣಿ

Published 9 ಮೇ 2024, 14:17 IST
Last Updated 9 ಮೇ 2024, 14:17 IST
ಅಕ್ಷರ ಗಾತ್ರ

ಬೀದರ್‌: ನಗರದ ಜ್ಞಾನಸುಧಾ ವಿದ್ಯಾಲಯ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದೆ.

ಶಾಲೆಗೆ ಒಟ್ಟು ಶೇ 99ರಷ್ಟು ಫಲಿತಾಂಶ ಬಂದಿದೆ. ಆರು ವಿದ್ಯಾರ್ಥಿಗಳು ಅಗ್ರಶ್ರೇಣಿ, 53 ವಿದ್ಯಾರ್ಥಿಗಳು ಪ್ರಥಮ ದರ್ಜೆ, 15 ಮಕ್ಕಳು ದ್ವಿತೀಯ ದರ್ಜೆ, ಮೂವರು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆದ 2023–24ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯಲ್ಲಿ ಶಾಲೆಯ ಒಟ್ಟು 78 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಶಾಲೆಯ ವಿದ್ಯಾರ್ಥಿನಿ ಗಾಯತ್ರಿ ಶಂಕರ ಶೇ 96.32 ಅಂಕ ಗಳಿಸಿದ್ದಾರೆ. ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದರೆ, ಇಂಗ್ಲಿಷ್‌ನಲ್ಲಿ 121, ಹಿಂದಿಯಲ್ಲಿ 99, ಗಣಿತದಲ್ಲಿ 90, ವಿಜ್ಞಾನ ಹಾಗೂ ಸಮಾಜ ವಿಜ್ಞಾನದಲ್ಲಿ ತಲಾ 96 ಅಂಕಗಳನ್ನು ಗಳಿಸಿದ್ದಾರೆ.

ಸಾಯಿಕುಮಾರ ಸಂಜೀವಕುಮಾರ (ಶೇ. 93.76), ಶ್ರೇಯಸ್‌ ಸಿದ್ಧಲಿಂಗಪ್ಪ (ಶೇ. 92.32), ಕುಮಾರಸಾಯಿ ಶಾಂತಯ್ಯ ಸ್ವಾಮಿ (ಶೇ. 89.44), ಭಕ್ತಿ ರಾಜಕುಮಾರ (ಶೇ. 88.32), ಶಿವಚಂದನ್ ವೀರಭೂಷಣ (ಶೇ 87.04), ಮನೋಜ್ ರಾಜಕುಮಾರ (ಶೇ. 93.52), ಜ್ಯೋತಿರಾಮ ಉಮೇಶ್ (ಶೇ 83.04), ಸಾಯಿಪ್ರಸಾದ್ ಸಂತೋಷ್ (ಶೇ. 81.12), ವೈಷ್ಣವಿ ರೇವಣಸಿದ್ದಪ್ಪ (ಶೇ. 80.96), ಖುಷಿ ಶನಗೊಂಡ ಬಾಬುರಾವ್ (ಶೇ. 80.16),  ಎಸ್. ಕೃತಿಕಾ ನರಸಿಂಹಚಾರಿ (ಶೇ. 80) ಅಂಕ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಮಾ ಜಿ., ನಿರ್ದೇಶಕ ಮುನೇಶ್ವರ ಲಾಖಾ ಸಂತಸ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್‌
ಶ್ರೇಯಸ್‌
ಗಾಯತ್ರಿ
ಗಾಯತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT