ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಡ ಸಮಾಜಕ್ಕೆ ನ್ಯಾಯಕ್ಕಾಗಿ ಪ್ರಯತ್ನ: ಶರಣು ಸಲಗರ

ಮಂಠಾಳದ ದೇವಸ್ಥಾನದಲ್ಲಿ ಶಾಸಕ ಶರಣು ಸಲಗರ ಹೇಳಿಕೆ
Last Updated 5 ಏಪ್ರಿಲ್ 2022, 5:01 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಗೊಂಡ ಕುರುಬರಿಗೆ ಹಾಗೂ ಟೋಕರಿ ಕೋಲಿ ಸಮಾಜಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ದೊರಕುವಂತಾಗಲು ಸತತವಾಗಿ ಪ್ರಯತ್ನಿಸುತ್ತೇನೆ’ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.

ತಾಲ್ಲೂಕಿನ ಮಂಠಾಳದ ಮಹಾಳಿಂಗರಾಯ ದೇವಸ್ಥಾನದಲ್ಲಿ ಭಾನುವಾರ ನಡೆದ ಜಾತ್ರೆಯಲ್ಲಿ ಅವರು ಮಾತನಾಡಿದರು.

‘ದೇವಸ್ಥಾನ ಸಮಿತಿಯಿಂದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಒದಗಿಸುತ್ತೇನೆ. ಸಮಾಜವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ವೀರ ಸಂಗೊಳ್ಳಿ ರಾಯಣ್ಣರಿಗೆ ಜನ್ಮನೀಡಿದ ಸಮಾಜದ ಜನರು ಧೈರ್ಯಶಾಲಿ ಆಗಿರುವ ಜತೆಗೆ ನಂಬಿಗಸ್ಥರೂ’ ಎಂದರು.

ಮುಖಂಡ ಸಂಜೀವಕುಮಾರ ವಾಡಿಕರ್ ಮಾತನಾಡಿ,‘ಸರ್ಕಾರಿ ಸೌಲಭ್ಯ ಪಡೆಯಲು ಹಿಂದುಳಿದವರಲ್ಲಿ ಒಗ್ಗಟ್ಟು ಅಗತ್ಯ’ ಎಂದರು.

ಮುಖಂಡ ಶಿವಕುಮಾರ ಶೆಟಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ದತ್ತು ಚಿಟ್ಟಂಪಲ್ಲೆ, ವಿಶ್ವನಾಥ ಹುಗ್ಗೆ ಪಾಟೀಲ, ಕಲ್ಲಪ್ಪ ಖಸಗೆ, ರವಿ ನಾಗೀನಕೆರೆ, ಪ್ರಭು ಶಿವಪ್ಪನೋರ್, ಮಹಾಪೂರಿ ಸೂರ್ಯವಂಶಿ, ರಾಜಕುಮಾರ ಹಿರಗೆಪ್ಪನೋರ್, ಶಿವಾಜಿ ಗಂಗೆ, ಸಂತೋಷ ಕೊಡಂಬಲೆ, ಹುಲೆಪ್ಪ, ಸಿದ್ರಾಮ ವಾಲೆ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT