ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

73 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಸರ್ಕಾರಿ ನೌಕರರ ಸಂಘದ ಚುನಾವಣೆ 13 ರಂದು
Last Updated 10 ಜೂನ್ 2019, 15:55 IST
ಅಕ್ಷರ ಗಾತ್ರ

ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯರ ಆಯ್ಕೆಗಾಗಿ ಜೂನ್ 13 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಚುನಾವಣೆ ನಡೆಯಲಿದೆ. ಒಟ್ಟು 73 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ.

ಜಿಲ್ಲಾ ಕಾರ್ಯಕಾರಿಣಿ ಸಮಿತಿಯ 62 ಸದಸ್ಯ ಸ್ಥಾನಗಳ ಪೈಕಿ 32 ಇಲಾಖೆಗಳಿಂದ ಈಗಾಗಲೇ 33 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 18 ಇಲಾಖೆಗಳಿಂದ ಬಾಕಿ ಉಳಿದ 29 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

‘ಮತದಾನಕ್ಕಾಗಿ ಜಿಲ್ಲೆಯಲ್ಲಿ 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 2,700 ಸರ್ಕಾರಿ ನೌಕರರು ಮತ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೌಕರರು ಭಾವಚಿತ್ರ ಸಹಿತ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ’ ಎಂದು ಚುನಾವಣಾಧಿಕಾರಿ ವೀರಪ್ಪ ಪಸಾರಗಿ ತಿಳಿಸಿದ್ದಾರೆ.

‘ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್‌, ಪಾಸ್‌ಪೋರ್ಟ್‌, ಇಲಾಖಾ ಗುರುತಿನ ಚೀಟಿ, ಪ್ಯಾನ್‌ಕಾರ್ಡ್‌, ಡ್ರೈವಿಂಗ್ ಲೆಸೆನ್ಸ್ ಪೈಕಿ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಮತದಾನ ದಿನವೇ ಮತ ಎಣಿಕೆ ನಡೆಸಲಾಗುವುದು. ಅನಂತರ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.

ಅಂತಿಮ ಕಣದಲ್ಲಿ ಇರುವವರು:
ಕಂದಾಯ ಇಲಾಖೆ (ಅಭಿವೃದ್ಧಿ ಇಲಾಖೆಗಳು ಒಳಗೊಂಡಂತೆ): ನೀಲಕಂಠ ಬಿರಾದಾರ, ಪ್ರದೀಪ ಅಂಗಡಿ, ಬಬ್ರುವಾನ, ಬಿ. ಸಂತೋಷ, ಮುಕುಂದ, ರವೀಂದ್ರ ರೊಟ್ಟಿ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: ವಿಜಯಕುಮಾರ ಸುಗಂದೆ, ವಿಶ್ವನಾಥ, ಸಿದ್ದಮ್ಮ.
ವಾಣಿಜ್ಯ ತೆರಿಗೆ ಇಲಾಖೆ: ಕಾಳೇಂದ್ರನಾಥ, ಝರೆಪ್ಪ ಹಸನ್ಮುಖಿ, ಪೃಥ್ವಿರಾಜ, ಮಲ್ಲಪ್ಪ, ರಾಜೇಂದ್ರಕುಮಾರ ಗಂದಗೆ, ಸಂಜುಕುಮಾರ.

ಸಹಕಾರ ಇಲಾಖೆ: ಸಂಗಮೇಶ, ಸುಜ್ಞಾನಿ. ಲೋಕೋಪಯೋಗಿ ಇಲಾಖೆ: ರಾಜಶೇಖರ ಮಠ, ಸುನೀಲ.

ನೀರಾವರಿ ಇಲಾಖೆ: ಕಂಟೆಪ್ಪ, ವಿಜಯಕುಮಾರ ಸಿಂಧೆ. ಜಿಲ್ಲಾ ಪಂಚಾಯಿತಿ: ಅಜಿಜ್ ಉರ್ ರೆಹೆಮಾನ್, ನೀಲಕಂಠ ಬೀರಗೆ.
ಅಬಕಾರಿ ಇಲಾಖೆ: ಅನಿಲಕುಮಾರ ಪೊದ್ದಾರ, ಆನಂದ ಉಕ್ಕಲಿ.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ: ಪ್ರೇಮಿಲಾಬಾಯಿ, ಸಂತೋಷ ರೆಡ್ಡಿ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಅಶೋಕ ರೆಡ್ಡಿ, ಎಂ.ಡಿ. ಅಬ್ದುಲ್ ಸತ್ತಾರ್, ಓಂಕಾರ, ಬೀರುಸಿಂಗ್, ರಾಜಕುಮಾರ ಮಾಳಗೆ, ಶಕುಂತಲಾ, ಶಿವಾನಂದ ಎಚ್.

ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಆಸ್ಪತ್ರೆಗಳು: ಎಂ.ಡಿ. ಖಯಾಮ, ಅಮಿನೊದ್ದಿನ್, ಚಂದ್ರಕಲಾ ಎನ್., ದಿಲೀಪಕುಮಾರ, ಪ್ರಕಾಶ ಎಸ್. ಮಡಿವಾಳ, ಸುಧಾಕರ.

ಆಯುಷ್ ಮತ್ತು ಇ.ಎಸ್.ಐ: ಡಾ. ಮಹಮ್ಮದ್ ಅಬ್ದುಲ್ ಸಲೀಂ, ಡಾ. ವೈಶಾಲಿ ಎಸ್. ಯುವಜನ ಸೇವೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ: ಮಲ್ಲಿಕಾರ್ಜುನ, ಸಿದ್ಧಾರ್ಥ. ಪ್ರಾಥಮಿಕ ಶಾಲೆಗಳು: ಅನ್ಸರುಲ್ಲಾ ಬೇಗ್, ಎಂ.ಡಿ. ಏಜಾಜ್ ಅಹಮ್ಮದ್, ಎಂ.ಡಿ. ಜಕಿ ಅಹಮ್ಮದ್, ಪ್ರಕಾಶ ರೆಡ್ಡಿ, ಪ್ರಭುಲಿಂಗ, ಮನೋಹರ ಕಾಶಿ, ಮಹಮ್ಮದ್ ಯುಸೂಫ್, ಯೋಗೇಂದ್ರ, ಶಿವರಾಜ ಕಪಲಾಪುರೆ, ಸುನೀಲಕುಮಾರ ಗಾಯವಾಡ, ಸುಮತಿ ರುದ್ರ.

ಪ್ರೌಢಶಾಲೆಗಳು: ಎಂ.ಡಿ. ರಹೇನ್ ಸಯ್ಯದ್, ಎಂ.ಡಿ. ಶಹಾಬುದ್ದಿನ್, ದಶರಥ, ಪಾಂಡುರಂಗ ಜಿ., ರಾಬರ್ಟ್ ದಾವಿದ್, ಶಿವಕುಮಾರ ಬಾವುಗೆ.

ರಾಜ್ಯ ಲೆಕ್ಕಪತ್ರ ಇಲಾಖೆ: ಎನ್. ಕಿರಣಕುಮಾರ, ರಾಜೇಶ ಮೈಲೂರಕರ್. ನ್ಯಾಯಾಂಗ (ನಾಯಾಲಯಗಳು): ಎಂ.ಡಿ. ಅಬ್ದುಲ್ ವಾಜಿದ್, ದಿಲೀಪಕುಮಾರ, ನೀಲಕಂಠ ಪಿ.ಎಸ್. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ (ತಾಲ್ಲೂಕು ಪಂಚಾಯಿತಿ): ಮಾಣಿಕರಾವ್ ಸುಭಾಷ, ವೀರಶೆಟ್ಟಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT