ಗುರುವಾರ , ಆಗಸ್ಟ್ 5, 2021
21 °C

ಹೆಬ್ಬಾಳೆ ಹೇಳಿಕೆ ಹಾಸ್ಯಾಸ್ಪದ :ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಚನಶೆಟ್ಟಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಸಿರಿಗನ್ನಡ ಪುಸ್ತಕ ಮಳಿಗೆ ಸ್ಥಾಪನೆಗೆ ಸಂಬಂಧಿಸಿದಂತೆ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಟೀಕಿಸಿದ್ದಾರೆ.

ಹಿರಿಯ ಕನ್ನಡ ಹೋರಾಟ ಪ್ರಭುರಾವ್ ಕಂಬಳಿವಾಲೆ ಹೆಸರಿನ ಬಸ್ ತಂಗುದಾಣ ಸ್ಥಳಾಂತರಿಸಿ ಅವರಿಗೆ ಅವಮಾನ ಮಾಡಿದ್ದಾರೆ. ಕಂಬಳಿವಾಲೆ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗುವುದು ಬಿಟ್ಟು ಇರುವಂಥ ತಂಗುದಾಣವನ್ನೇ ತೆರವು ಗೊಳಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಮಾಡದ ಕೆಲಸ ನಾನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕಸಾಪದ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಲ್ಲ. ಅದು ಹಿಂದಿನ ಅಧ್ಯಕ್ಷರು ಏನೂ ಮಾಡಿಲ್ಲವೆಂದರ್ಥವೆ? ಸ್ವತಃ ಹೆಬ್ಬಾಳೆಯವರೇ ಕಸಾಪಗೆ ಮೂರು ಅವಧಿಗೆ ಅಧ್ಯಕ್ಷರಾದವರು ಈ ಹೇಳಿಕೆ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ.

ಪರಿಷತ್ತಿಗೆ ಯಾವುದೇ ಸಂಘ ಸಂಸ್ಥೆಗಳ ಹೋಲಿಕೆ ಸರಿಯಲ್ಲ. ಕಂಬಳಿವಾಲೆ ಬಸ್‌ ತಂಗುದಾಣವನ್ನೇ ಸ್ಥಳಾಂತರಿಸಿ ಮಳಿಗೆ ನಿರ್ಮಿಸಿಕೊಂಡಿರುವುದನ್ನು ಈಗಾಗಲೇ ಜಿಲ್ಲೆಯ ಹಿರಿಯ ಸಾಹಿತಿಗಳು ಖಂಡಿಸಿದ್ದಾರೆ. ಕಸಾಪ ವಿರುದ್ಧ ಮಾತನಾಡುವುದು ಸಮಸ್ತ ಕನ್ನಡಿಗರಿಗೆ ಬಗೆದ ಅವಮಾನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.