ಬಸವಕಲ್ಯಾಣ: ‘ನಗರದ ಸಾರ್ವಜನಿಕ ಆಸ್ಪತ್ರೆಯ ಹಳೆಯ ಕಟ್ಟಡದ ಮೇಲೆಯೇ ₹29 ಕೋಟಿ ವೆಚ್ಚದ ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಿಸುತ್ತಿರುವುದು ಎಷ್ಟು ಸರಿ. ಮೊದಲಿನದು ಶಿಥಿಲಗೊಂಡಿದ್ದರೆ ಅದರ ವಿಸ್ತರಣೆ ಅಪಾಯಕಾರಿಯಲ್ಲವೇ’ ಎಂದು ಶಾಸಕ ಶರಣು ಸಲಗರ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

‘ಇಷ್ಟು ದೊಡ್ಡ ಮೊತ್ತದಲ್ಲಿ ಹೊಸ ಆಕರ್ಷಕ ಕಟ್ಟಡ ನಿರ್ಮಿಸಬಹುದು. ನ್ಯಾಯಾಲಯಕ್ಕೆ ಹತ್ತಿಕೊಂಡಿರುವ ಖಾಲಿ ಜಾಗ ಅದಕ್ಕಾಗಿ ಬಳಸಿಕೊಳ್ಳಬಹುದು. ಆದ್ದರಿಂದ ಟೆಂಡರ್ ಪ್ರಕ್ರಿಯೆ ಆರಂಭ ಆಗುವುದಕ್ಕೂ ಮುಂಚೆಯೇ ಸಂಬಂಧಿತರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವುದು ಅತ್ಯಗತ್ಯ. ಹುಲಸೂರನಲ್ಲೂ ಇದೇ ರೀತಿ ಕಟ್ಟಡ ನಿರ್ಮಿಸುತ್ತಿದ್ದರೆ ಅದನ್ನೂ ತಡೆಯಬೇಕು. ನಗರಸಭೆಯ ಹಳೆಯ ಕಚೇರಿ ಕಟ್ಟಡ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಒದಗಿಸಬೇಕು’ ಎಂದರು.

‘ಅತಿವೃಷ್ಟಿಯಿಂದ ಎಲ್ಲ ಕೃಷಿಕರಿಗೂ ಹಾನಿಯಾಗಿದೆ. ಬೆಳೆ ವಿಮೆ ನೀಡುವುದಕ್ಕೆ ಏಳು ವರ್ಷಗಳ ಬೆಳೆ ಪರಿಸ್ಥಿತಿಯ ವರದಿ ಪರಿಶೀಲಿಸುವುದು ಸರಿ ಅಲ್ಲ. ಈ ಬಗ್ಗೆ ಹೊಸ ನಿಯಮ ರೂಪಿಸುವುದಕ್ಕೆ ಎಲ್ಲರೂ ಆಗ್ರಹಿಸಬೇಕಾಗಿದೆ. ಪ್ರತಾಪುರ ಮತ್ತು ಆಲಗೂಡ ರಸ್ತೆ ಸುಧಾರಣಾ ಕಾರ್ಯ ತೀವ್ರಗೊಳಿಸಬೇಕು’ ಎಂದರು.

ಕೆಡಿಪಿಯ ನಾಮನಿರ್ದೇಶಿತ ಸದಸ್ಯ ವಿಶ್ವನಾಥ ಕಾಂಬಳೆ ಮಾತನಾಡಿ, ‘ನಗರದ ಮುಖ್ಯ ರಸ್ತೆಯಲ್ಲಿ ದೂಳು ಏಳುತ್ತಿರುವ ಕಾರಣ ಅಸ್ತಮಾ ರೋಗಿಗಳು ಹೆಚ್ಚಿದ್ದಾರೆ‘ ಎಂದರು. ‘ಕೃಷಿ ಇಲಾಖೆಯಿಂದ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಡೆಸಬಾರದು’ ಎಂದು ಸದಸ್ಯರಾದ ಶಿವಕುಮಾರ ಶೆಟಗಾರ್ ಮತ್ತು ಆನಂದ ಪಾಟೀಲ ಕೇಳಿಕೊಂಡರು. ‘ಸಾರ್ವಜನಿಕ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು’ ಎಂದು ಸೈಯದ್ ನವಾಜ್ ಕಾಜ್ಮಿ, ಸಂದೀಪ ಬುಯೆ, ಅನ್ನಪೂರ್ಣ ಅಂಬಾರಾಯ ಆಗ್ರಹಿಸಿದರು.

ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್, ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ, ಹುಲಸೂರ ತಹಶೀಲ್ದಾರ್ ಶಿವಾನಂದ ಮೇತ್ರೆ, ಇಒ ರಮೇಶ ಸುಲ್ಫಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಹೊಸ ಕಟ್ಟಡದಲ್ಲಿ ಶೌಚಾಲಯ ಮತ್ತಿತರೆ ವ್ಯವಸ್ಥೆ ಇದ್ದರೂ ಸೌಲಭ್ಯ ಇಲ್ಲವೆಂದರೆ ಏನರ್ಥ? ಪೌರಾಯುಕ್ತರು ಶೀಘ್ರ ಇಲ್ಲಿಗೆ ನಗರಸಭೆ ಕಚೇರಿ ಸ್ಥಳಾಂತರಿಸಬೇಕು
ಶರಣು ಸಲಗರ ಶಾಸಕ

ಶಾಸಕ - ಸದಸ್ಯರ ಮಧ್ಯೆ ವಾಗ್ವಾದ

ಸಹಾಯಕ ಸಾರಿಗೆ ಅಧಿಕಾರಿಗಳು ವರದಿ ಒಪ್ಪಿಸುತ್ತಿದ್ದಾಗ ಸಸ್ತಾಪುರ ಆಟೊ ನಗರದ ವ್ಯವಸ್ಥೆಗೆ ಸಂಬಂಧಿಸಿದ ವಿಷಯ ಪ್ರಸ್ತಾಪವಾಯಿತು. ಆಗ ಶಾಸಕ ಶರಣು ಸಲಗರ ಮತ್ತು ಕೆಡಿಪಿಗೆ ಹೊಸದಾಗಿ ನಾಮನಿರ್ದೇಶಿತಗೊಂಡಿರುವ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಉಪಯೋಗವಿಲ್ಲದ ವಿಷಯದ ಬಗ್ಗೆ ಚರ್ಚಿಸಿ ಸಮಯ ಹಾಳು ಮಾಡುವುದು ಸರಿಯಲ್ಲ ಎಂದು ಸದಸ್ಯರು ಹರಿಹಾಯ್ದರು. ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್ ಮಧ್ಯಪ್ರವೇಶಿಸಿ ಎಲ್ಲರನ್ನೂ ಶಾಂತಗೊಳಿಸಿದರು. ಸಭೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರೂ ಆಗಿರುವ ಸದಸ್ಯರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದರಿಂದ ಸಭೆ ರಂಗು ಪಡೆದುಕೊಂಡಿತ್ತು. ಪ್ರತಾಪುರ ರಸ್ತೆ ಸುಧಾರಣೆ ಬಗ್ಗೆ ಗುತ್ತಿಗೆದಾರರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದ ಶಾಸಕರು ಕೆಲಸ ಕೈಗೊಳ್ಳದಿದ್ದರೆ ಬ್ಲಾಕ್ ಲಿಸ್ಟ್ ನಲ್ಲಿ ಸೇರಿಸುತ್ತೇನೆ ಎಂದು ಎಚ್ಚರಿಸಿದ ಪ್ರಸಂಗವೂ ನಡೆಯಿತು. 20 ಕ್ಕೂ ಅಧಿಕ ಪೊಲೀಸ್ ರಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.