ಭಾಲ್ಕಿ: ‘ಭಾರತೀಯ ಪರಂಪರೆಯಲ್ಲಿ ಜಾತ್ರೆಗಳಿಗೆ ಮಹತ್ವವಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಶರಣರ ಜಾತ್ರೆಗಳು ಪೂರಕವಾಗಿವೆ’ ಎಂದು ಮೆಹಕರನ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ರಾಜೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.

ತಾಲ್ಲೂಕಿನ ನಾವದಗಿ ಗ್ರಾಮದ ರೇವಪ್ಪಯ್ಯಾ ಮಂದಿರದಲ್ಲಿ ಸದ್ಗುರು ರೇವಪ್ಪಯ್ಯಾ ಸ್ವಾಮೀಜಿಯ 83ನೇ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿದರು.

ಶರಣರ ಮಹತ್ವ ಮರಣದಲ್ಲಿ ಕಾಣುತ್ತೇವೆ. ಅವರು ದೇಹ ಬಿಟ್ಟನಂತರ ನಾವು ಅವರ ಹೆಸರಿನಲ್ಲಿ ಜಾತ್ರೆ ಆಚರಿಸುತ್ತೇವೆ. ಈ ಜಾತ್ರೆಗಳಿಗೆ ಯಾವುದೇ ಜಾತಿ, ಧರ್ಮದ ಲೇಪವಿರುವುದಿಲ್ಲ. ಎಲ್ಲ ಧರ್ಮಿಯರು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ ಎಂದು ಹೇಳಿದರು.

ಹುಡಗಿಯ ಕರಿಬಸವೇಶ್ವರ ಸಂಸ್ಥಾನ ಮಠದ ವಿರೂಪಾಕ್ಷ ಶಿವಾಚಾರ್ಯರು ಮಾತನಾಡಿ,‘ರೇವಪ್ಪಯ್ಯಾ ಶರಣರ ಗದ್ದುಗೆಯಲ್ಲಿ ವಿಶಿಷ್ಟ ಶಕ್ತಿ ಇದೆ. ಅದು ಉನ್ನತ ಮಟ್ಟಕ್ಕೆ ಕೊಂಡೊಯುತ್ತದೆ’ ಎಂದರು. ಸನ್ಮುಖ ಸ್ವಾಮಿ ಚೌಕಿಮಠ ಉದಗೀರ, ಮೃತ್ಯುಂಜಯ ಸ್ವಾಮೀಜಿ ಕಲ್ಲೂರ, ಮಾರುತಿಲಿಂಗ ಮುತ್ಯಾ ಬೀರಿ (ಕೆ) ಉಪಸ್ಥಿತರಿದ್ದರು. ರೇವಪ್ಪಯ್ಯಾ ಸಂಸ್ಥಾನ ಟ್ರಸ್ಟ್ನ ಪ್ರದೀಪ್ ಸ್ವಾಗತಿಸಿದರು. ಶಾಂತವೀರ ಸ್ವಾಮಿ ನಿರೂಪಿಸಿದರು. ಬಸವರಾಜ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.