ಭಾನುವಾರ, ಜುಲೈ 3, 2022
28 °C
ಮೂರ್ತಿ ಅನಾವರಣ ಸಮಾರಂಭದಲ್ಲಿ ಶಾಸಕ ಕಾಶೆಂಪುರ ಹೇಳಿಕೆ

ನೀರಿನ ಸಮಸ್ಯೆ ಪರಿಹರಿಸಿದ ಬೊಮ್ಮಗೊಂಡೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಮಹಾತ್ಮ ಬೊಮ್ಮಗೊಂಡೇಶ್ವರರು ಬರಗಾಲದ ವೇಳೆ ಜನರ ನೀರಿನ ಸಮಸ್ಯೆ ಪರಿಹರಿಸಿದ್ದರು ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.
ಬೀದರ್ ತಾಲ್ಲೂಕಿನ ಕಪಲಾಪುರ (ಎ) ಗ್ರಾಮದಲ್ಲಿ ಮಹಾತ್ಮ ಬೊಮ್ಮಗೊಂಡೇಶ್ವರ ಮೂರ್ತಿ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೊಮ್ಮಗೊಂಡೇಶ್ವರರಿಗೆ 600 ವರ್ಷಗಳ ಇತಿಹಾಸ ಇದೆ. ಈಗಲೂ ಅವರ ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ. ಅವರು ನಮ್ಮೆಲ್ಲರಿಗೆ ಆದರ್ಶ ಎಂದು ನುಡಿದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಬೊಮ್ಮಗೊಂಡೇಶ್ವರರು ಜಗತ್ತು ಗುರುತಿಸುವಂಥ ಕೆಲಸ ಮಾಡಿದ್ದಾರೆ ಎಂದರು.
ಗ್ರಾಮದ ಸಿದ್ಧಾರೂಢ ಟ್ರಸ್ಟ್ ಅಧ್ಯಕ್ಷ ಪೂರ್ಣಾನಂದ ಭಾರತಿ ಸ್ವಾಮೀಜಿ, ರುದನೂರಿನ ಕಮರಿಮಠ ಗಣೇಶ್ವರ ಆಶ್ರಮದ ದೇವಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ, ಮಹೇಶ ಮೈಲಾರೆ, ಡಾ. ಶರಣಪ್ಪ ಮಲಗೊಂಡ, ಆನಂದ ಕೆ. ಸಿಕೇನಪುರೆ, ಈಶ್ವರಿ, ಹಣಮಂತರಾವ್ ಮೈಲಾರೆ, ಶಿವಕುಮಾರ ಬೀರ್ಗೆ, ಶಿವಕುಮಾರ ಕೊಳಾರ, ಸತೀಶ್ ಸಿಕೇನಪುರೆ, ಚನ್ನಮ್ಮ ವಿಜಯಕುಮಾರ, ಅನುಷಾಬಾಯಿ, ತಂಗೆಮ್ಮ ಅಮೃತ, ಶ್ರೀಪತಿ ತಳಘಟೆ, ಶಿವಶರಣಪ್ಪ ಮೇತ್ರೆ, ದೇವಾನಂದ ಧನ್ನೂರೆ, ಅನಿಲ್ ಡಬರೆ, ವೀರೇಶ ತಳಘಟೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.