ಬುಧವಾರ, ಮೇ 18, 2022
28 °C
ಮಾರುಕಟ್ಟೆಯಲ್ಲಿ ಬೀಗಿದ ಬೀನ್ಸ್‌, ಬೀಟ್‌ರೂಟ್

ತರಕಾರಿ ಬೆಲೆ ಕೊಂಚ ಹೆಚ್ಚಳ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಗ್ರಾಹಕರ ಬಹು ನೆಚ್ಚಿನ ಹಿರೇಕಾಯಿ ಇಲ್ಲಿಯ ಮಾರುಕಟ್ಟೆಯಲ್ಲಿ ಹಿರೇತನ ಉಳಿಸಿಕೊಂಡಿದೆ. ತರಕಾರಿ ರಾಜ ಬದನೆಕಾಯಿಗಿಂತ ನಾವೇನೂ ಕಮ್ಮಿ ಇಲ್ಲ ಎನ್ನುವಂತೆ ಬೀನ್ಸ್ ಹಾಗೂ ಬೀಟ್‌ರೂಟ್ ಬೆಲೆಯಲ್ಲಿ ಸರಿಸಮಾನವಾಗಿ ನಿಂತಿವೆ. ಬಹುತೇಕ ತರಕಾರಿಗಳ ಬೆಲೆ ಪ್ರತಿ ಕೆ.ಜಿಗೆ ₹ 40ರಿಂದ ₹ 60 ಆಸುಪಾಸಿನಲ್ಲಿಯೇ ಇದೆ.

ಕರಿಬೇವು, ಚವಳೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ, ಟೊಮೆಟೊ ₹ 1,500, ಆಲೂಗಡ್ಡೆ, ಬೀಟ್‌ರೂಟ್‌, ಬೆಳ್ಳುಳ್ಳಿ, ಬೀನ್ಸ್‌, ಎಲೆಕೋಸು, ಹೂಕೋಸು, ಡೊಣ ಮೆಣಸಿನಕಾಯಿ, ನುಗ್ಗೆಕಾಯಿ, ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿಕೆಯಾಗಿದೆ.

ಗಜ್ಜರಿ, ತೊಂಡೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಇಳಿಕೆಯಾಗಿದೆ. ಈರುಳ್ಳಿ, ಮೆಣಸಿನಕಾಯಿ, ಬದನೆಕಾಯಿ, ಹಿರೇಕಾಯಿ, ಬೆಂಡೆಕಾಯಿ, ಸಬ್ಬಸಗಿ, ಮೆಂತೆ ಸೊಪ್ಪು, ಪಾಲಕ್‌ ಬೆಲೆ ಸ್ಥಿರವಾಗಿದೆ.

ಈ ವಾರ ಕೆಲ ತರಕಾರಿ ಬೆಲೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಸಾಮಾನ್ಯ ತರಕಾರಿಗಳ ಬೆಲೆ ಸ್ಥಿರವಾಗಿದೆ. ಫೆಬ್ರುವರಿಯಲ್ಲಿ ಯಾವುದೇ ಹಬ್ಬಗಳು ಇಲ್ಲ. ಆದರೆ, ಹವಾಮಾನ ವೈಪರೀತ್ಯದಿಂದ ಕೆಲ ಕಡೆ ತರಕಾರಿ ಬೆಳೆಗೆ ಕೀಟಬಾಧೆ ಕಾಣಿಸಿಕೊಳ್ಳಲಾರಂಭಿಸಿದೆ. ಕೀಟಬಾಧೆಯಿಂದ ಹೆಚ್ಚು ತರಕಾರಿ ಬಂದರೆ ಬೆಲೆ ಕಡಿಮೆಯಾಗಲಿದೆ. ಫಸಲು ಕಡಿಮೆ ಬಂದರೆ ಬೆಲೆ ಹೆಚ್ಚಳವಾಗಲಿದೆ.

‘ವಾರಾಂತ್ಯ ಕರ್ಫ್ಯೂ ತೆರವುಗೊಳಿಸಿದ ನಂತರ ರೈತರು ಹಾಗೂ ವ್ಯಾಪಾರಿಗಳು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ನೆರೆಯ ರಾಜ್ಯಗಳಿಂದಲೂ ಬೀದರ್‌ ಮಾರುಕಟ್ಟೆಗೆ ತರಕಾರಿ ಬರುತ್ತಿದೆ. ಚಳಿಯಲ್ಲಿ ಗ್ರಾಹಕರು ನುಗ್ಗೆಕಾಯಿ ಹೆಚ್ಚು ಇಷ್ಟಪಡುತ್ತಾರೆ. ಮಾರುಕಟ್ಟೆಗೆ ಪೂರೈಕೆ ಕಡಿಮೆ ಇರುವ ಕಾರಣ ಸಹಜವಾಗಿಯೇ ಅದರ ಬೆಲೆ ದುಪ್ಪಟ್ಟಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಾನಂದ ಮಾಡಗೂಳ ಹೇಳುತ್ತಾರೆ.

ತೆಲಂಗಾಣದ ಜಿಲ್ಲೆಗಳಿಂದ ಹಿರೇಕಾಯಿ, ಸೌತೆಕಾಯಿ, ಚವಳೆಕಾಯಿ, ಗಜ್ಜರಿ, ಬೀಟ್‌ರೂಟ್‌ ಆವಕವಾಗಿದೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಆವಕವಾಗಿದೆ. ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಬದನೆಕಾಯಿ, ಹೂಕೋಸು, ಎಲೆಕೋಸು ಹಾಗೂ ಕೊತಂಬರಿ ಮಾರುಕಟ್ಟೆಗೆ ಬಂದಿದೆ.

............................................................................
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ  ವಾರ   ಈ ವಾರ
........................................................................

ತರಕಾರಿ ಮಾರುಕಟ್ಟೆ ಬೆಲೆ

ಈರುಳ್ಳಿ 20-30, 20-30
ಮೆಣಸಿನಕಾಯಿ 30-40, 30-40
ಆಲೂಗಡ್ಡೆ 15-20, 20-30
ಎಲೆಕೋಸು 20-25, 25-30
ಬೆಳ್ಳುಳ್ಳಿ 25-30, 30-40
ಗಜ್ಜರಿ 30-40, 20-30
ಬೀನ್ಸ್‌ 30-40, 40-50
ಬದನೆಕಾಯಿ 30-40, 30-40
ಮೆಂತೆ ಸೊಪ್ಪು 15-20, 10-20
ಹೂಕೋಸು 30-40, 40-50
ಸಬ್ಬಸಗಿ 30-40, 30-40
ಬೀಟ್‌ರೂಟ್‌ 30-40, 40-50
ತೊಂಡೆಕಾಯಿ 40-50, 30-40
ಕರಿಬೇವು 30-40, 50-60
ಕೊತಂಬರಿ 10-20, 20-30
ಟೊಮೆಟೊ 10-15, 20-30
ಪಾಲಕ್‌ 20-30, 20-30
ಬೆಂಡೆಕಾಯಿ 40-50, 40-50
ಹಿರೇಕಾಯಿ 50-60, 40-60
ನುಗ್ಗೆಕಾಯಿ 80-100, 150-200
ಡೊಣ ಮೆಣಸಿನಕಾಯಿ 60-70, 60-80
ಚವಳೆಕಾಯಿ 30-40, 50-60

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.