ಮಂಗಳವಾರ, ಜೂನ್ 15, 2021
27 °C

ಸ್ವಾತಂತ್ರ್ಯೋತ್ಸವ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ವಿವಿಧೆಡೆ ದೇಶದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಕರ್ನಾಟಕ ಕಾಲೇಜು: ನಗರದ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಧ್ವಜಾರೋಹಣ ಮಾಡಿದರು.

ಆರ್.ವಿ. ಬಿಡಪ ಕಾನೂನು ಕಾಲೇಜಿನ ಪ್ರಾಧ್ಯಾಪಕ ರಾಜಶೇಖರ ಗೌಡ, ಉಪನ್ಯಾಸಕರಾದ ರಾಜೇಶ್ವರಿ ಪಾಟೀಲ, ಸಚಿನ್ ವಿಶ್ವಕರ್ಮ, ಗಣೇಶ, ಶಂಕರ ಮಲ್ಲಶೆಟ್ಟಿ, ಶರಣಯ್ಯ ಹಿರೇಮಠ, ಪ್ರಕಾಶ ಭೂರೆ, ಎಂ.ಎಲ್. ರಾಸೂರ ಇದ್ದರು.
ಜೀಜಾಮಾತಾ ಕನ್ಯಾ ಪ್ರೌಢಶಾಲೆ: ನಗರದ ಜೀಜಾಮಾತಾ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ಧ್ವಜಾರೋಹಣ ಮಾಡಿದರು.

ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಲ್ಲಪ್ಪ ಹೂಗಾಡೆ, ಮಲ್ಲಿಕಾರ್ಜುನ ಬೆಂಬುಳಗೆ, ರಾಜಕುಮಾರ ಗಾದಗೆ, ಆನಂದ ಜಾಧವ್, ತಾನಾಜಿ ನಿರಗೂಡೆ, ಸಂಜಯ ಪಾಟೀಲ, ಅನಿಲಕುಮಾರ ಟೇಕೋಳೆ, ಅರ್ಜುನ ಧೂಳೆ, ಭೀಮಶಾ ಈರಣ್ಣ, ಬಸವರಾಜ ರಾಯಪಳ್ಳಿಕರ್ ಇದ್ದರು.

ಭಗತ್‍ಸಿಂಗ್ ವೃತ್ತ: ಇಲ್ಲಿಯ ಭಗತ್‍ಸಿಂಗ್ ವೃತ್ತದಲ್ಲಿ ವೃತ್ತದ ರೂವಾರಿ ವಿಜಯಕುಮಾರ ಸೋನಾರೆ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಧ್ವಜಾರೋಹಣ ಮಾಡಿದರು.

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಶಾಸಕ ರಹೀಂಖಾನ್, ವಿಜಯಕುಮಾರ ಸೋನಾರೆ, ಮುಖಂಡರಾದ ಫರ್ನಾಂಡೀಸ್, ಬೀರುಸಿಂಗ್, ಶಿವರಾಜ ಕಟಗಿ, ಸುಧಾಕರ ಎಲ್ಲಾನೋರ್, ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೊಡಗೆ, ಉಪಾಧ್ಯಕ್ಷ ಅಮರ ಗಾದಗಿ ಇದ್ದರು.

ನೌಬಾದ್: ನೌಬಾದ್‍ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಏಕನಾಥರಾವ್ ಚೊಂಡೆ ಧ್ವಜಾರೋಹಣ ಮಾಡಿದರು.

ಉಪಾಧ್ಯಕ್ಷ ರಾಜಕುಮಾರ ಕಲ್ಯಾಣರಾವ್, ನಿರ್ದೇಶಕರಾದ ಕಾಶೀನಾಥ ಪಾಟೀಲ, ಶಿವರಾಜ ಗಂಗಶೆಟ್ಟಿ, ಸುನೀಲ ವೀರಶೆಟ್ಟಿ, ತಿಪ್ಪಣ್ಣ ನಾಗಪ್ಪ, ಬಸಪ್ಪ ತಿಪ್ಪಣ್ಣ ಇದ್ದರು.

ಹಿಂದೂ ಜಾಗರಣ ವೇದಿಕೆ: ನೌಬಾದ್‍ನ ಬಸವೇಶ್ವರ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಸ್ವಾತಂತ್ರ್ಯೋತ್ಸವ, ಸಂಗೊಳ್ಳಿ ರಾಯಣ್ಣ ಹಾಗೂ ಭಾರತ ಮಾತೆ ಪೂಜೆ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಸೋಮಣ್ಣ ಭಂಗೂರೆ, ಸಂಜು ಭಂಗೂರೆ, ಬಬ್ಲು ಮಾಳಗೆ, ಸಚಿನ್ ಹೆಗ್ಗೆ, ಮಲ್ಲು, ಸಂಗು ಹುಮನಾಬಾದೆ, ಕೀರ್ತಿವಾನ, ವಿಶಾಲ ಅತಿವಾಳೆ, ಓಂಕಾರ, ನಾಗರಾಜ, ಲೋಕೇಶ ಇದ್ದರು.

ವಿವಿ ನೌಕರರ ಒಕ್ಕೂಟ: ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ನಗರದ ಬಸವಗರದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ವೀರಭದ್ರಪ್ಪ ಉಪ್ಪಿನ್, ಡಾ. ಸಿ. ಆನಂದರಾವ್, ಅರವಿಂದ ಕುಲಕರ್ಣಿ, ಮಂದಾಕಿನಿ, ಚನ್ನಬಸಪ್ಪ, ಪ್ರವೀಣ, ಅಶ್ವಿನಿ, ಮಾಲಾ ಉಪಸ್ಥಿತರಿದ್ದರು.

ಹಿರಿಯ ನಾಗರಿಕರ ಮನೆ: ನಗರದ ಮಹಾತ್ಮ ಜ್ಯೋತಿಬಾ ಫುಲೆ ಹಿರಿಯ ನಾಗರಿಕರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕಲ್ಚರಲ್, ವೆಲ್‍ಫೇರ್ ಸೊಸೈಟಿ ಅಧ್ಯಕ್ಷ ಅನಿಲಕುಮಾರ ಬೆಲ್ದಾರ್ ರಾಷ್ಟ್ರಧ್ವಜ ನೆರವೇರಿಸಿದರು.

ಸಂಸ್ಥೆಯ ಅಧ್ಯಕ್ಷ ನವೀನ್ ರಾಜೇಶ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಕಾರ್ಯದರ್ಶಿ ಕಪಿಲ್ ಪಾಟೀಲ, ನಿರ್ದೇಶಕ ಡಾ. ನಿತೇಶ ಬಿರಾದಾರ, ಸತ್ಯ ಸಾವಿತ್ರಿ, ಬಾಲಾಜಿ ಫೋಟಕರ್, ಪ್ರವೀಣ ಪಾಟೀಲ, ವಿಜಯಲಕ್ಷ್ಮಿ, ಚಂದ್ರಶೇಖರ ಪಾಟೀಲ ಇದ್ದರು.

ಕೈಲಾಸ ಸಂಘ: ನಗರದ ಕೈಲಾಸ ವಿವಿದೊದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮನೋಹರರಾವ್ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು.

ನಾಗಯ್ಯ ಸ್ವಾಮಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಬಸಯ್ಯ ಸ್ವಾಮಿ, ನಿರ್ದೇಶಕರಾದ ಸೋಮನಾಥ ಆರ್. ಕಾಡೋದೆ, ಮಾಣಿಕರಾವ್ ಕುಲಕರ್ಣಿ, ಸಿದ್ರಾಮಪ್ಪ ಸಿ., ಅಶೋಕ ಟಿ., ನೀಲಕಂಠ ಆರ್, ಶಂಕರ ಎಸ್., ಶ್ರೀದೇವಿ ಸ್ವಾಮಿ, ಶಶಿಕಲಾ ಎನ್. ಸ್ವಾಮಿ, ವಿವೇಕಾನಂದ ಭೋಸ್ಲೆ, ಅನಿಲಕುಮಾರ ನೇಳಗೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.