ಗುರುವಾರ , ಅಕ್ಟೋಬರ್ 21, 2021
29 °C

ಬಸವಕಲ್ಯಾಣ: ಯೋಧ ಪ್ರಮೋದ ಸೂರ್ಯವಂಶಿ ಕಾಶ್ಮೀರದಲ್ಲಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಜಾಜನಮುಗಳಿ ಗ್ರಾಮದ ನಿವಾಸಿ, ಯೋಧ ಪ್ರಮೋದ ಸೂರ್ಯವಂಶಿ (45) ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಶನಿವಾರ ನಿಧನರಾಗಿದ್ದಾರೆ.

ಪ್ರಮೋದ ಅವರು 25 ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದರು. ಅವರಿಗೆ ಸುಬೇದಾರರನ್ನಾಗಿ ಬಡ್ತಿಯೂ ನೀಡಲಾಗಿತ್ತು. ತಂದೆ ನಾರಾಯಣರಾವ್ ಕೂಡ ನಿವೃತ್ತ ಸೈನಿಕ ಆಗಿದ್ದಾರೆ. ತಂದೆಯಂತೆಯೇ ದೇಶಸೇವೆಗೆ ನಿಯೋಜನೆಗೊಂಡಿದ್ದರು. ಇವರು ತಂದೆ, ತಾಯಿ, ಪತ್ನಿ ಹಾಗೂ ಒಬ್ಬ ಪುತ್ರ, ಪುತ್ರಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ಆರೋಗ್ಯ ಹದಗೆಟ್ಟಿದ್ದರಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ ಎಂದು ಜಾಜನಮುಗಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅವರ ಸಂಬಂಧಿಕರಾದ ಧನರಾಜ ಜಾಧವ ತಿಳಿಸಿದ್ದಾರೆ.

ಭಾನುವಾರ (ಸೆ.26) ಮಧ್ಯಾಹ್ನ ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಇವರ ಅಂತ್ಯಕ್ರಿಯೆ ನೆರವೆರಲಿದೆ. ಇದಕ್ಕಾಗಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು