ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಶಿವ-ಪಾರ್ವತಿ ಮೂರ್ತಿ ಪ್ರತಿಷ್ಠಾಪನೆ

Published 28 ಫೆಬ್ರುವರಿ 2024, 5:18 IST
Last Updated 28 ಫೆಬ್ರುವರಿ 2024, 5:18 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಯನಗುಂದಾ ಗ್ರಾಮದಲ್ಲಿ ಸೋಮವಾರ ಸಂಜೆ ಭಕ್ತರ ಹರ್ಷೋಲ್ಲಾಸ ಹಾಗೂ ಜಯಘೋಷಣೆ ನಡುವೆ ಶಿವ-ಪಾರ್ವತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.

ಹಣೆಗಾಂವ್ ಮಠದ ಶಂಕರಲಿಂಗ ಸ್ವಾಮೀಜಿ, ಡಾಕುಳಗಿಯ ಚನ್ನಬಸವೇಶ್ವರ ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಮಲ್ಲಯ್ಯ ಸ್ವಾಮೀಜಿ ಅವರು ಧಾರ್ಮಿಕ ವಿಧಿ ವಿಧಾನದ ಮೂಲಕ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಿದರು.

ಹಣೆಗಾಂವ್ ಮಠದ ಶಂಕರಲಿಂಗ ಸ್ವಾಮೀಜಿ ಮಾತನಾಡಿ,‘ಯನಗುಂದಾ ಭಕ್ತರು ಧಾರ್ಮಿಕ ಕಾರ್ಯಕ್ರಮ ನಡೆಸಿ ಯುವ ಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ಬಿತ್ತಿದ್ದಾರೆ. ಸಮಾಜದಲ್ಲಿ ಸದಾ ಇಂತಹ ಕಾರ್ಯ ನೆರವೇರಬೇಕು’ ಎಂದು ಹೇಳಿದರು.

‘ಎಲ್ಲಿ ಭಕ್ತಿ ಇರುತ್ತದೆ, ಅಲ್ಲಿ ದೇವರು ಇರುತ್ತಾನೆ. ದೇವರು ಎಂದ ಕ್ಷಣ ಮನುಷ್ಯನಲ್ಲಿ ಭಯ, ಭಕ್ತಿ ಇರುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ’ ಎಂದು ತಿಳಿಸಿದರು.

ಮುಖಂಡ ಗುಂಡಯ್ಯ ಸ್ವಾಮಿ, ಗುರಯ್ಯ ಸ್ವಾಮಿ, ವಿಜಯಕುಮಾರ ಮೇತ್ರೆ, ಕಲ್ಲಯ್ಯ ಸ್ವಾಮಿ, ಗುರುಪಾದಪ್ಪ ಕೋರೆ, ಸಿದ್ರಾಮ ಕೋರೆ, ಅಶೋಕ ಶೆಟಕಾರ, ಕೃಷ್ಣ ಕಾಂಬಳೆ, ಬಸವರಾಜ ಪಾಟೀಲ, ಸಿದ್ದು ಪಾಟೀಲ, ಸಿದ್ದು ಹಂಗರಗೆ, ಪ್ರಭು ಪಾಟೀಲ, ಉಮಾಕಾಂತ ಮೊರೆ, ಬಸವರಾಜ ವಾಡೆ ಇದ್ದರು.

ಯನಗುಂದಾ ಹಾಗೂ ಸುತ್ತಲಿನ ಗ್ರಾಮಗಳ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT