ಮಂಗಳವಾರ, ಆಗಸ್ಟ್ 16, 2022
29 °C

‘ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಟಗುಪ್ಪ: ‘ಸೆ.8 ರಂದು ವಿಶ್ವದಾದ್ಯಂತ ಸಾಕ್ಷರತಾ ದಿನ ಆಚರಿಸಲಾಗುತ್ತದೆ. ಶಿಕ್ಷಣದ ಮಹತ್ವ ಸಾರುವ ಈ ದಿನ ಕಲಿಕೆಯಲ್ಲಿ ನಾವು ಯಾವ ಹಂತದಲ್ಲಿದ್ದೇವೆ ಎನ್ನುವುದನ್ನು ಸಹ ತಿಳಿಸುತ್ತದೆ’ ಎಂದು ನಂದಿನಿ ಮಹಿಳಾ ಮಂಡಳದ ಅಧ್ಯಕ್ಷೆ ಲಕ್ಷ್ಮಿ ತಿಳಿಸಿದರು.

ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ನಂದಿನಿ ಮಹಿಳಾ ಮಂಡಳ ಆಯೋಜಿಸಿದ್ದ ‘ವಿಶ್ವ ಸಾಕ್ಷರತಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1965 ನವೆಂಬರ್ 17 ರಲ್ಲಿ ಯುನೆಸ್ಕೊ ಸೆಪ್ಟೆಂಬರ್ 18 ಅನ್ನು ವಿಶ್ವ ಸಾಕ್ಷರತಾ ದಿನವನ್ನಾಗಿ ಘೋಷಿಸಿತು. 1965 ರಲ್ಲಿ ಇರಾನಿನಲ್ಲಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಜಗತ್ತಿನಲ್ಲಿ ಅನಕ್ಷರತೆಯನ್ನು ಇನ್ನಿಲ್ಲದಂತೆ ಮಾಡಬೇಕು ಎಂಬ ನಿರ್ಧಾರ ಕೈಗೊಂಡು ಸಾಕ್ಷರತಾ ದಿನ ಆಚರಣೆ ಮಾಡಲಾಯಿತು’ ಎಂದರು.

ಮಹಿಳಾ ಮಂಡಳದ ಸದಸ್ಯೆ ಉಮಾಶ್ರೀ ಮಾತನಾಡಿ,‘ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಮೂಲಕ ಯೋಚನಾ ಶಕ್ತಿಯನ್ನು ಬೆಳೆಸಬೇಕು. ಶಿಕ್ಷಣದಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ಸಾಧ್ಯ ಎಂದು ನಂಬಿರುವ ವಿಶ್ವ ಸಂಸ್ಥೆಯು ಸಾಕ್ಷರತೆಯಲ್ಲಿ ಹಿಂದುಳಿದ ದೇಶಗಳನ್ನು ಮೇಲೆತ್ತುವ ಕಾರ್ಯ ಮಾಡುತ್ತ ಬಂದಿದೆ’ ಎಂದು ನುಡಿದರು.

ಉಪಾಧ್ಯಕ್ಷೆ ಸಂಗೀತಾ ಮಾತನಾಡಿದರು. ಸದಸ್ಯೆಯರಾದ ಮಮತಾ, ಸುವರ್ಣ, ಭಾರತಿ, ಶ್ವೇತಾ ಹಾಗೂ ವಿಕ್ಟೊರಿಯಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.