ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಕೌಶಲ ತರಬೇತಿಗೆ ಅರ್ಜಿ ಆಹ್ವಾನ

Last Updated 19 ಜೂನ್ 2021, 13:25 IST
ಅಕ್ಷರ ಗಾತ್ರ

ಬೀದರ್: ಡಿಸಿಸಿ ಬ್ಯಾಂಕ್ ಪ್ರಾಯೋಜಿತ ಇಲ್ಲಿಯ ಶಾರದಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಕೇಂದ್ರ ಗಾಮೀಣ ಅಭಿವೃದ್ಧಿ ಸಚಿವಾಲಯದ ಎನ್.ಆರ್.ಎಲ್.ಎಂ ಯೋಜನೆಯಡಿ ವಸತಿ ಸಹಿತ ವಿವಿಧ ಕೌಶಲ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಿದೆ.

ಜುಲೈನಲ್ಲಿ ಮಹಿಳೆಯರಿಗೆ ಹೊಲಿಗೆ, ಬ್ಯೂಟಿ ಪಾರ್ಲರ್, ಕಾಸ್ಟಿಮ್ ಆಭರಣ ತಯಾರಿಕೆ, ಮೃದು ಗೊಂಬೆಗಳ ತಯಾರಿಕೆ, ಮೇಣದ ಬತ್ತಿ ತಯಾರಿಕೆ ತರಬೇತಿ ನೀಡಲಿದೆ.

ಆಗಸ್ಟ್‌ನಲ್ಲಿ ಯುವತಿಯರು/ಮಹಿಳೆಯರಿಗೆ ಜೂಟ್ ಬ್ಯಾಗ್ ತಯಾರಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಹೊಲಿಗೆ, ಮಸಾಲಾ ಪೌಡರ್, ಉಪ್ಪಿನಕಾಯಿ, ಪಾಪಡ್ ತಯಾರಿಕೆ ತರಬೇತಿ ಕೊಡಲಿದೆ.

ಸೆಪ್ಟೆಂಬರ್‌ನಲ್ಲಿ ಯುವಕರಿಗೆ ದ್ವಿಚಕ್ರ ವಾಹನ ದುರಸ್ತಿ, ಕೃಷಿ ಉದ್ಯಮಿ, ಸಿ.ಸಿ ಟಿವಿ ಕ್ಯಾಮೆರಾ ಇನ್‌ಸ್ಟಾಲೇಷನ್, ಅಂಗವಿಕಲರಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಿದೆ. ಅಕ್ಟೋಬರ್‌ನಲ್ಲಿ ಯುವಕರಿಗೆ ಕಂಪ್ಯೂಟರ್ ಹಾರ್ಡ್‍ವೇರ್ ಆ್ಯಂಡ್ ನೆಟ್‍ವರ್ಕಿಂಗ್, ಕೃಷಿ ಉದ್ಯಮಿ, ಮೊಬೈಲ್ ಫೋನ್ ದುರಸ್ತಿ, ಸಣ್ಣ ಉದ್ಯಮದಾರರಿಗೆ ಉದ್ಯಮಶೀಲತಾ ತರಬೇತಿ ನೀಡಲಿದೆ.

18ರಿಂದ 45 ವರ್ಷದ ಒಳಗಿನ ನಿರುದ್ಯೋಗಿ ಯುವಕ/ಯುವತಿಯರು, ಮಹಿಳೆಯರು ಅರ್ಜಿ ಸಲ್ಲಿಸಬಹುದು. ಆಸಕ್ತರು ನಿರ್ದೇಶಕರು, ಶಾರದಾ ಆರ್‍ಸೆಟಿ, ಪ್ರತಾಪನಗರ, ಲಾಹೋಟಿ ಮಾರುತಿ ಶೋರೂಂ ಹತ್ತಿರ, ಬೀದರ್ ಇಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08482-232810 ಅಥವಾ ಮೊಬೈಲ್ ಸಂಖ್ಯೆ 9632212268 ಗೆ ಸಂಪರ್ಕಿಸಬಹುದು ಎಂದು ಶಾರದಾ ಆರ್‍ಸೆಟಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT