ಜನವಾಡ: ಬೀದರ್ ತಾಲ್ಲೂಕಿನ ಸಿಂದೋಲ್-ಯಾಕತಪುರ (ವಯಾ ತಡಪಳ್ಳಿ) ರಸ್ತೆ ಡಾಂಬರೀಕರಣ ಮಾಡಬೇಕು ಎಮದು ಭಾರತೀಯ ರಾಷ್ಟ್ರೀಯ ಭೀಮ ಆರ್ಮಿ ಸಮಿತಿ ಒತ್ತಾಯಿಸಿದೆ.

ಸಮಿತಿಯ ಪದಾಧಿಕಾರಿಗಳು ಬೀದರ್ನಲ್ಲಿ ಬುಧವಾರ ಈ ಕುರಿತು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

9ಕಿ.ಮೀ. ಉದ್ದದ ರಸ್ತೆ ಹಾಳಾಗಿ 15 ವರ್ಷಗಳು ಕಳೆದಿವೆ. ಆದರೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ರಸ್ತೆ ಹದಗೆಟ್ಟ ಕಾರಣ ಸಿಂದೋಲ್, ಸಿಂದೋಲ್ ತಾಂಡಾ, ತಡಪಳ್ಳಿ, ಪಾತರಪಳ್ಳಿ, ಶೇಕಾಪುರ ಗ್ರಾಮಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನೇಕ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ ಎಂದು ಹೇಳಿದರು.

ಸಮಿತಿಯ ರಾಜ್ಯ ಅಧ್ಯಕ್ಷ ದಿಲೀಪಕುಮಾರ ವರ್ಮಾ, ಉಪಾಧ್ಯಕ್ಷ ಅಶೋಕ ಭಾವಿದೊಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಾವಿದೊಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ರಾಹುಲ್ ಭಂಗೂರೆ, ಉಪಾಧ್ಯಕ್ಷ ಅವಿನಾಶ್ ಭಾಲ್ಕೆ, ಪ್ರಮುಖರಾದ ಭೀಮರಾವ್ ಖಂದಾರೆ, ಗೌತಮ ಕೌಡೆ, ಭಗತ್ ಸಿಂಧೆ, ಜಾವೀದ್ಮಿಯಾ, ಜಗನ್ನಾಥ ಹೊನ್ನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.