ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣವೆಂದರೆ ದೂರದೃಷ್ಟಿ: ಗವಿಶ್ರೀ

Last Updated 10 ಏಪ್ರಿಲ್ 2022, 5:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಶರಣರು ಕಟ್ಟಿದ್ದ ಕಲ್ಯಾಣವೆಂದರೆ ಪಟ್ಟಣವಲ್ಲ. ಅದು ದೂರದೃಷ್ಟಿ, ಉತ್ತಮ ಸಂಸ್ಕಾರದ ಕೇಂದ್ರ. ಅದು ಕಾಯಕ, ದಾಸೋಹದ ಕೇಂದ್ರ, ಪ್ರೇಮದ ಕೋಟೆ’ ಎಂದು ಕೊಪ್ಪಳ ‌ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ನಗರದ ತೇರು ಮೈದಾನದಲ್ಲಿ ಶನಿವಾರ ನಡೆದ ಬಸವಕಲ್ಯಾಣ ಯಾತ್ರಾ ಪರ್ವದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಬಸವಣ್ಣನವರು ಕಟ್ಟಿದ್ದ ಅನುಭವ ಮಂಟಪ ಕೂಡ ಪರಿಪೂರ್ಣ ಸಂಸತ್ತು ಆಗಿತ್ತು. ಆದ್ದರಿಂದ ಅದನ್ನು ಜಗತ್ತಿನ ಪ್ರಥಮ ಸಂಸತ್ತು ಎನ್ನುತ್ತಾರೆ. ಕಲ್ಯಾಣಕ್ಕೆ ಬರುವವರು ವಚನ ಗಂಗೆಯಲ್ಲಿ ಮಿಯ್ಯಲು ಬರುತ್ತಿದ್ದರು’ ಎಂದರು.

‘ಖಾಲಿ ಬಾಟಲಿಗೆ‌ ಬೆಲೆ ಇಲ್ಲ. ಆದರೆ ಬಾಟಲಿಯಲ್ಲಿ ನೀರು, ತುಪ್ಪ, ಹಾಲು ತುಂಬಿದಂತೆ ಬೇರೆ ಬೇರೆ ಬೆಲೆ ಬರುತ್ತದೆ. ಅದರಂತೆ ಸಂಸ್ಕಾರ‌ ಪಡೆದವರಿಗೆ‌ ಬೆಲೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT