ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರ ಲೇಸು ಬಯಸುವವ ನಿಜವಾದ ಸಾಹಿತಿ

ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅಭಿಮತ
Last Updated 4 ಡಿಸೆಂಬರ್ 2019, 8:54 IST
ಅಕ್ಷರ ಗಾತ್ರ

ಬೀದರ್: ‘ಸರ್ವರಿಗೂ ಲೇಸು ಬಯಸುವ ಸಾಹಿತ್ಯ ರಚಿಸುವವನೇ ನಿಜವಾದ ಸಾಹಿತಿ’ ಎಂದು ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅಭಿಪ್ರಾಯಪಟ್ಟರು.

ನಗರದ ವಿ.ಕೆ.ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ಭಾನುವಾರ ಸಮತಾ ಸಾಂಸ್ಕೃತಿಕ ಅಧ್ಯಯನ ಕೇಂದ್ರ ವತಿಯಿಂದ ಸಂವಿಧಾನ ಮತ್ತು ಸಂವಿಧಾನದ ಆಶಯಗಳ ರಕ್ಷಣೆ ಕುರಿತು ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನ ಶ್ರೇಷ್ಠ ಗ್ರಂಥವಾಗಿದೆ’ ಎಂದರು.

ಪತ್ರಕರ್ತ ಗಂಧರ್ವ ಸೇನಾ ಅಧ್ಯಕ್ಷತೆ ವಹಿಸಿದ್ದರು. ವಿಜಯಲಕ್ಷ್ಮಿ ಗೌತಮಕರ್, ಅಜೀತ್‌ ನೇಳಗೆ, ನಾಗಶೆಟ್ಟಿ ಧರಂಪೂರೆ ಸ್ವರಚಿತ ಕವನ ವಾಚನ ಮಾಡಿದರು.

ಶಿಕ್ಷಕ ಸಂಜೀವಕುಮಾರ ಅತಿವಾಳೆ, ಸಾಹಿತಿ ಶಾಮರಾವ್ ನೆಲವಾಡೆ, ಸಾಮಾಜಿಕ ಹೋರಾಟಗಾರ ಶಿವರಾಜ ಕಟಗಿ, ನಾರಾಯಣರಾವ್ ಹಾಗೂ ಭೀಮರಾವ್ ಬೀದರಿಕರ್ ಇದ್ದರು.

ಸಮತಾ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಕಂಟೆಪ್ಪ ಗುಮ್ಮೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT