ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕಿಸಾನ್ ಸಭಾ ಕಾರ್ಯಕರ್ತರ ಪ್ರತಿಭಟನೆ

Last Updated 26 ನವೆಂಬರ್ 2021, 16:00 IST
ಅಕ್ಷರ ಗಾತ್ರ

ಬೀದರ್‌: ಎ.ಪಿ.ಎಂ.ಸಿ.ಕಾಯ್ದೆ, ಭೂ ಸುಧಾರಣೆ ಕಾಯ್ದೆಗಳಲ್ಲಿ ಮಾಡಲಾದ ತಿದ್ದುಪಡಿ ಹಿಂಪಡೆಯಬೇಕು ಹಾಗೂ ಬಗರ ಹುಕುಂ ಕ್ರಮ ಬದ್ದಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಕರ್ನಾಟಕ ರಾಜ್ಯ ಕೃಷಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶವ್ಯಾಪಿ ಚಳವಳಿ ನಡೆಸಿದ ನಂತರ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಇನ್ನುಳಿದ ಬೇಡಿಕೆಗಳನ್ನೂ ಸರ್ಕಾರ ಮನ್ನಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯಿಂದಾಗಿ ರೈತರಲ್ಲದವರೂ ಭೂಮಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬಂಡವಾಳ ಶಾಹಿಗಳು ಜಮೀನು ಖರೀದಿಸಲು ಅನುವು ಮಾಡಿಕೊಟ್ಟಂತಾಗಿದೆ. ರೈತರ ಹಿತದೃಷ್ಟಿಯಿಂದ ಈ ಕಾಯ್ದೆಯನ್ನೂ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹ್ಮದ್, ಎಂ.ಡಿ. ಖಮರ್‌ ಪಟೇಲ್, ಬಾಬುರಾವ್ ಹೊನ್ನಾ, ಅಬ್ದುಲ್ ಖಾದದ್, ಎಂ.ಡಿ ಶಫಾಯತ್ ಅಲಿ, ಗುರುಪಾದಯ್ಯ, ಪ್ರಭು ತಗಣಿಕರ್, ಖದೀರ್‌ಮಿಯಾ, ಪಪ್ಪುರಾಜ ಮೇತ್ರೆ, ಸುನೀಲ ವರ್ಮಾ, ರಂಗಣ್ಣಾ ಪೂಜಾರಿ, ಮಹ್ಮದ ಅಲಿ, ಮಲ್ಲಯ್ಯ ಶಣ್ಮುಖಯ್ಯ, ರಾಕೇಶ, ಬಾಬುರಾವ ವಾಡೇಕರ್, ಇಮಾನುವೆಲ್, ಸುನೀಲ್, ಶಿವಮೂರ್ತಿ ರುದ್ರಮುನಿ, ಶಿವಣಯ್ಯ ಗುರುಪಾದಯ್ಯ, ಝರೆಮ್ಮ ಈರಣ್ಣ, ತಾಹೇರಾಬಿ ಜಾಂಗಿರಸಾಬ್, ಕಾಶಣ್ಣ ಬಸವಣಪ್ಪ, ವಿಠ್ಠಲ ಭೀಮಶಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT