ಮಂಗಳವಾರ, ಜೂನ್ 22, 2021
22 °C

ಮಲ್ಲಯ್ಯ ಮುತ್ಯಾ ಆಶ್ರಮದ ಶರಣಮ್ಮ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ತಾಲ್ಲೂಕಿನ ಕೌಡಗಾಂವ್ ಗ್ರಾಮದ ಬಳಿಯ ಮಲ್ಲಯ್ಯ ಮುತ್ಯಾ ಆಶ್ರಮದ ಲಕ್ಷ್ಮಿಬಾಯಿ (ಶರಣಮ್ಮ) ಕಲ್ಲಪ್ಪ ಜಾಬಶೆಟ್ಟಿ (35) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಆಶ್ರಮದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ನನ್ನ ಸಾವಿಗೆ ನಾನೇ ಕಾರಣ ಎಂಬುದಾಗಿ ಡೆತ್ ನೋಟ್ ಬರೆದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಸ್‍ಐ ಸಿದ್ಧಲಿಂಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಲಕ್ಷ್ಮಿಬಾಯಿ ಅವರು ಬಾಲ ಸನ್ಯಾಸಿಯಾಗಿದ್ದು, 11 ವರ್ಷಗಳಿಂದ ಆಶ್ರಮದಲ್ಲಿ ಇದ್ದಾರೆ. ಇವರ ಆತ್ಮಹತ್ನೆ ನಮಗೆ ಅತೀವ ದುಃಖ ತಂದಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕೌಡಗಾಂವ್ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.