ಬೀದರ್: ನಗರದ ಮಯೂರ ಸಭಾಂಗಣದಲ್ಲಿ ಕರುನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಗಿಲಾವ್ ಕಾರ್ಮಿಕರ ಸಂಘ, ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಮತ್ತು ಕ್ರೆಡೈ ಸಂಯುಕ್ತಾಶ್ರಯದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಉದ್ಘಾಟಿಸಿ ಮಾತನಾಡಿದರು.

‘ಕಾರ್ಮಿಕರ ಅಭಿವೃದ್ದಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಬಹಳಷ್ಟು ಹಣ ಇದ್ದು, ಅದನ್ನು ನಿಜವಾದ ಕಾರ್ಮಿಕರಿಗೆ ವಿವಿಧ ಯೋಜನೆಗಳ ಮೂಲಕ ಕಲ್ಪಿಸಬೇಕು. ಕಾರ್ಮಿಕರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕು. ಈ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಕೆಲಸ ಮಾಡಬೇಕು’ ಎಂದರು.

ಶಕುಂತಲಾ ಬೆಲ್ದಾಳೆ ಮಾತನಾಡಿ, ಕಾರ್ಮಿಕರಿಂದಲೆ ಡಾ.ಶೈಲೆಂದ್ರ ಬೆಲ್ದಾಳೆ ಶಾಸಕರಾಗಿದ್ದಾರೆ. ಕಾರ್ಮಿಕರ ಸೌಲಭ್ಯಗಳಿಗಾಗಿ ಮಾಂಜ್ರ ಮಹಿಳಾ ಸಹಕಾರ ಬ್ಯಾಂಕಿನಿಂದ ಸೌಲಭ್ಯ ಕೊಡಿಸುವುದಾಗಿ ಹೇಳಿದರು.

ಐ.ಸಿ.ಐ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ಮಾತನಾಡಿ, ‘ಎಂಜಿನಿಯರ್ಗಳು ಕಟ್ಟಡಗಳ ಪ್ಲಾನ್ ತಯಾರಿಸಿದ್ದಾರೆ. ಕಾರ್ಮಿಕರು ಆ ಕಟ್ಟಡದ ಜೀವ ತುಂಬುತ್ತಾರೆ’ ಎಂದರು.

ಕಾರ್ಮಿಕ ನಿರೀಕ್ಷಕ ಸುವರ್ಣ ಮಾತನಾಡಿ, ‘ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯ ಮಂಜೂರು ಮಾಡಲಾಗುವುದು. ನಕಲಿ ಕಾರ್ಮಿಕರ ಹಾವಳಿ ತಡೆಗಟ್ಟುವುದು ಕಾರ್ಮಿಕ ಸಂಘಟನೆಗಳ ಜವಾಬ್ದಾರಿಯಾಗಿದೆ’ ಎಂದರು.

ಕರುನಾಡು ಕಟ್ಟಡ ಮತ್ತು ಗಿಲಾವ್ ಕಾರ್ಮಿಕರ ಸಂಘದ ಅಧ್ಯಕ್ಷ ಸಂಜುಕುಮಾರ ಶಿಂಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರೆಡೈ ಅಧ್ಯಕ್ಷ ರವಿ ಮೂಲಗೆ, ಡಿಎಸ್ಎಸ್ ಸಂಚಾಲಕ ಶಿವಕುಮಾರ ನೀಲಿಕಟ್ಟಿ, ಎಂಜಿನಿಯರ್ ಅನೀಲಕುಮಾರ ಔರಾದೆ, ಗಣೇಶ ಶೀಲವಂತ, ಸಿದ್ದು, ಚಿಟ್ಮೆ, ಸತೀಶ ವಡ್ಡೆ, ವಿಶ್ವ ಕನ್ನಡಿಗರ ಸಂಸ್ಥೆ, ಕರ್ನಾಟಕ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ಕಾರ್ಮಿಕರಾದ ಓಂಕಾರ ನೆಳಗೆ ಲಕ್ಷ್ಮಣ ಅಯಾಸಪೂರ, ತುಕರಾಮ ಬಸಂತಪುರ, ನರಸಿಂಗ್ ಅಮಲಾಪೂರ, ಲಕ್ಷ್ಮಣ ಶಾಹಪೂರ, ನರಸಿಂಗ್ ಚಿದ್ರಿ, ಭೀಮಶಾ ಮೀರಾಗಂಜ್, ಬಾಬುಮಿಯ್ಯಾ ಸಾಧಕಅಲಿ, ಪ್ರದೀಪ ಶರ್ಮಾ, ಆಕಾಶ, ಅನೀಲಕುಮಾರ, ಗೌತಮ, ಶಿವಕುಮಾರ ಹಾರೂರಗೇರಿ, ಶ್ರಾವಣ, ನಾಗೇಶ, ಮಧು, ಶಿವಕುಮಾರ, ಯದಲಾಪೂರ ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.