ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಗಣೇಶ ಮೂರ್ತಿಗಳಿಗಿಲ್ಲ ಬೇಡಿಕೆ

Last Updated 30 ಆಗಸ್ಟ್ 2022, 5:19 IST
ಅಕ್ಷರ ಗಾತ್ರ

ಹುಲಸೂರ: ಪಟ್ಟಣದಲ್ಲಿ ಕುಂಬಾರರು ಹಾಗೂ ಸ್ವಾಮಿ ಮನೆತನದವರು 25 ವರ್ಷಗಳಿಂದ ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಸಿ ಮನೆ ಮನೆಗೆ ತೆರಳಿ ವಿತರಿ ಸಿ ಅವರು ಕೊಟ್ಟದ್ದನ್ನು ತೆಗೆದುಕೊಂಡು ಬರುತ್ತಿದ್ದರು. ಆದರೆ, ಕೆರೆ ಹಾಗೂ ಹಳ್ಳದ ದಡದಲ್ಲಿ ಮಣ್ಣು ದೊರೆಯದ ಕಾರಣ ಈಗ ಆ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಆಗುತ್ತಿಲ್ಲ.

ಮಣ್ಣಿನ ಮೂರ್ತಿ ತಯಾರಿಸಿ ವಿತರಿಸುತ್ತಿದ್ದ ಹಿರಿಯರು ಇಂದು ಯಾರೂ ಬದುಕಿಲ್ಲ. ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಾಣ ಕಾರ್ಯ ನಿಂತಿದೆ. ಅಲ್ಲದೆ, ಮಣ್ಣಿನ ಮೂರ್ತಿಗಳನ್ನು ಯಾರೂ ಕೇಳುತ್ತಿಲ್ಲ. ಬಣ್ಣ ಬಣ್ಣದ ಪಿಒಪಿ ಮೂರ್ತಿಗಳಿಗೆ ಮಾರು ಹೋಗಿದ್ದಾರೆ.

‘ಸಂಪ್ರದಾಯ ಮುರಿಯಬಾರದು ಎಂಬ ಕಾರಣಕ್ಕೆ ಮಹಾರಾಷ್ಟ್ರದಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ’ ಎಂದು ಹೇಳುತ್ತಾರೆ ಶಿವಕುಮಾರ ಮೈನಾಳೆ ಸ್ವಾಮಿ.

‘ಜನ ಬಣ್ಣ ಬಣ್ಣದ ಗಣೇಶ ಮೂರ್ತಿಗಳಿಗೆ ಮಾರು ಹೋಗುತ್ತಿದ್ದಾರೆ. ಅದರಿಂದಾಗುವ ಮಾಲಿನ್ಯದ ಅರಿವಿಲ್ಲ. ಆದ್ದರಿಂದ ನಾವೂ ಪಿಒಪಿ ಮೂರ್ತಿ ತಂದು ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಮಲ್ಲಿಕಾರ್ಜುನ ಬಡದಾಳೆ.

ಇದುವರೆಗೂ ಯಾರೂ ಗಣೇಶ ಮೂರ್ತಿಗಳಿಗೆ ಬೇಡಿಕೆ ಇಟ್ಟಿಲ್ಲ. 10 ವರ್ಷಗಳಿಂದ ಮಹಾರಾಷ್ಟ್ರದ ಲಾತೂರ್ ಹಾಗೂ ನಿಲಂಗಾದಲ್ಲಿ ತಯಾರಿಸಿದ ಪಿಒಪಿ ಮೂರ್ತಿಗಳ ನ್ನು ತಂದು ಮಾರಾಟ ಮಾಡಲಾಗುತ್ತಿದೆ ಎಂದು ಡಿಗಂಬರ ವಿಭೂತೆ ತಿಳಿಸುತ್ತಾರೆ.

ಪಿಒಪಿ ಮೂರ್ತಿಗಳಿಂದಾಗುವ ಪರಿಸರ ಮಾಲಿನ್ಯದ ಕುರಿತು ಸರ್ಕಾರ ಜನರಲ್ಲಿ ಅರಿವು ಮೂಡಿಸಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವವರಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಪರಿಸರ ಪ್ರೇಮಿ ರಾಜಕುಮಾರ ತೊಂಡಾರೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT