ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳೀಯ ಭಾಷೆಯಲ್ಲಿ ಸಾಹಿತ್ಯ ರಚಿಸಿ’

ಹುಮನಾಬಾದ್‌: ಉಮೇಶ ಮಠದ ರಚಿತ ಚಿಗುರೆಲೆಗಳು ಕೃತಿ ಬಿಡುಗಡೆ
Last Updated 3 ಫೆಬ್ರುವರಿ 2020, 8:45 IST
ಅಕ್ಷರ ಗಾತ್ರ

ಹುಮನಾಬಾದ್: ರಾಜ್ಯದಲ್ಲಿ ಪ್ರತಿ ನೂರು ಕಿಲೋಮೀಟರ್‌ ದಾಟಿದರೆ ಭಾಷೆಯಲ್ಲಿಬದಲಾವಣೆ ಕಾಣುತ್ತದೆ. ಹಾಗಾಗಿ ಸಾಹಿತ್ಯದಲ್ಲಿ ಸ್ಥಾನಿಕ ಭಾಷೆ ಬಳಸಿದರೆ ಅದು ಪ್ರಭಾವಕಾರಿಯಾಗಿ ಸಮೃದ್ದ ಸಾಹಿತ್ಯ ರಚನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ಗಗನ್ ಎಂ.ಆರ್. ಸಲಹೆ ನೀಡಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕಚೇರಿ ಸಭಾಂಗಣದಲ್ಲಿ ಮಾಣಿಕ ಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ರಂಗ ಸೌರಭ ಕಲಾ ಸಂಘ (ರಿ) ಚಿತ್ರದುರ್ಗ ಸಂಯುಕ್ತಾಶ್ರಯದಲ್ಲಿ ಶನಿವಾರ ಸಾಹಿತಿ ಉಮೇಶ ಮಠದ ರಚಿಸಿದ ‘ಚಿಗುರೆಲೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿ ಮಾರ್ಮಿಕವಾದ ಸಾಹಿತ್ಯವನ್ನು ರಚಿಸಿದರೆ ಉನ್ನತ ಸಾಧನೆ ಮಾಡುವುದರ ಜೊತೆಗೆ ಸ್ವಾಸ್ಥ್ಯ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸಬಹುದು ಎಂದು ಹೇಳಿದರು.

ಕಲಬುರ್ಗಿಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿದೇರ್ಶಕ ಡಿ.ಅಜಯಕುಮಾರ ಮಾತನಾಡಿ, ಇಂದಿನ ಯುವ ಜನಾಂಗ ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಯುವಕರು ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಓದಿನ ಸಂಸ್ಕೃತಿ ಉತ್ತೇಜಿಸಬೇಕಾದರೆ ಸಾಹಿತ್ಯಿಕ ಕಾರ್ಯಕ್ರಮಗಳು ನಾಡಿನ ಎಲ್ಲಾ ಕಡೆ ನಿರಂತರ ನಡೆಯುವಂತಾಗಬೇಕು. ಯಾರಿಗೂ ಓದಲು ಸಮಯವಿಲ್ಲದ ಕಾಲದಲ್ಲಿ ಚುಟುಕುಗಳು ಎಲ್ಲರನ್ನು ಕಡಿಮೆ ಸಮಯದಲ್ಲಿ ಓದಿಸಿಕೊಂಡು ಹೋಗುತ್ತವೆ. ಹಾಗಾಗಿ ಯುವ ಸಾಹಿತಿ ಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಚಿತ್ರದುರ್ಗದ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಶರಣು ವಿಶ್ವ ವಚನ ಪೌಂಡೇಶನ್ ಜಿಲ್ಲಾಧ್ಯಕ್ಷ ಸಾಹಿತಿ ಡಾ.ಗವಿಸಿದ್ಧಪ್ಪ ಅವರು ಚಿಗುರೆಲೆಗಳು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಮಾಣಿಕ ಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನ ಅಧ್ಯಕ್ಷ ಶಿವಶಂಕರ ತರನಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಕೆ.ಎಂ.ಬಸಯ್ಯ ಸ್ವಾಮಿ, ಏಕಾಂತಮ್ಮ, ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶ ಅಪ್ಪಸಾಬ ನಾಯಿಕ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವರಾಜ ಮೇತ್ರೆ, ಕೆ. ವೀರಾರೆಡ್ಡಿ, ರುಕ್ಮುದ್ದೀನ್ ಇಸ್ಲಾಂಪುರ, ಈಶ್ವರ ತಡೋಳಾ, ಕಸಾಪ ನಿಕಟಪೂರ್ವ ಅಧ್ಯಕ್ಷ ರವೀಂದ್ರಕುಮಾರ ಭಂಡಾರಿ, ಭೀಮಸೇನಾ ಗಾಯಕವಾಡ, ವಿಜಯಕುಮಾರ ಚೆಟ್ಟಿ, ಹಿರಿಯ ಸಾಹಿತಿ ಕಾಶಿನಾಥ ರೆಡ್ಡಿ, ಸಿದ್ದಪ್ಪ ಕುದರೆ, ಬಸಮ್ಮ ಬಮ್ಮಣಿ, ಕಾಶಿನಾಥ ಮಾಶೆಟ್ಟಿ, ಶಿಕ್ಷಕಿ ಆಶಾ, ಚೈತ್ರಸ್ವಾಮಿ, ಮೋಹಿದೀನ್ ಖಾನ್, ಚನ್ನಪ್ಪಾ ಚಿತ್ತಕೊಟಾ, ವೀರಂತರೆಡ್ಡಿ ಜಂಪಾ, ಶಕಿಲ್ ಐ ಎಸ್, ಲೇಖಕ ಉಮೇಶ ಮಠದ, ಶಿವ ಸ್ವಾಮಿ ಚೀನಕೇರಾ, ಶಿವಾನಂದ ಖಜೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT