ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಚಿದೇವರಿಗೆ ‘ವೀರ ಗಣಾಚಾರಿ’ ಎಂಬ ಖ್ಯಾತಿ: ಮುಚಳಂಬ ಪ್ರಣವಾನಂದ ಸ್ವಾಮೀಜಿ

ತತ್ವ ದರ್ಶನ ಕಾರ್ಯಕ್ರಮದಲ್ಲಿ ಮುಚಳಂಬದ ಪ್ರಣವಾನಂದ ಸ್ವಾಮೀಜಿ ಅಭಿಮತ
Published 19 ಆಗಸ್ಟ್ 2024, 16:25 IST
Last Updated 19 ಆಗಸ್ಟ್ 2024, 16:25 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಶರಣ ಮಡಿವಾಳ ಮಾಚಿದೇವರು ತನ್ನ ಕಾರ್ಯಗಳಿಂದ 12ನೇ ಶತಮಾನದಲ್ಲಿನ ಶರಣರಲ್ಲಿ ವೀರ ಗಣಾಚಾರಿ ಎಂದು ಹೆಸರು ಪಡೆದಿದ್ದರು’ ಎಂದು ಮುಚಳಂಬ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ನಗರದ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಸೋಮವಾರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ತತ್ವದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಡಿವಾಳ ಸಮಾಜದ ಜನರು ಸಹ ಸ್ವಾಭಿಮಾನಿ ಆಗಿದ್ದಾರೆ. ಬಟ್ಟೆ ಸ್ವಚ್ಛಗೊಳಿಸಿ ಕೊಳೆ ತೆಗೆಯುವ ಕೆಲಸ ಮಾಡಿದರೂ ಪ್ರಾಮಾಣಿಕರಾಗಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾರೆ’ ಎಂದರು.

ಅನುಭವ ಮಂಟಪ ಸಂಚಾಲಕ ಶಿವಾನಂದ ದೇವರು ಮಾತನಾಡಿ,‘ಮಡಿವಾಳ ಮಾಚಿದೇವರು ಬಸವತತ್ವ ನಿಷ್ಠರು, ಶರಣಗಣ ಮತ್ತು ವಚನ ಸಾಹಿತ್ಯದ ಸಂರಕ್ಷಕರು ಆಗಿದ್ದಾರೆ. ಅವರ ಸಂದೇಶದ ಪಾಲನೆ ಅಗತ್ಯ’ ಎಂದು ಹೇಳಿದರು.

ಬಂದವರ ಓಣಿ ಅಕ್ಕಮಹಾದೇವಿ ಗವಿಯ ಸತ್ಯಕ್ಕತಾಯಿ ಮಾತನಾಡಿ,‘ಮಾಚಿದೇವರು ಕಲ್ಯಾಣವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಧರ್ಮ ಕಾರ್ಯದಲ್ಲಿ ತೊಡಗಿದ್ದರು’ ಎಂದರು.

ಮಡಿವಾಳ ಸಮಾಜ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ದಿಗಂಬರ ಮಡಿವಾಳ, ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಸಸ್ತಾಪುರೆ, ರವೀಂದ್ರ ಮಡಿವಾಳ, ಸಂತೋಷ ಮಡಿವಾಳ ಪ್ರತಾಪುರ ಹಾಗೂ ಬಸವರಾಜ ಮಡಿವಾಳ ಮಾತನಾಡಿದರು.

ದಿಲೀಪ ಮಡಿವಾಳ, ವಿಜಯಕುಮಾರ ಮಡಿವಾಳ, ವೀರಶೆಟ್ಟಿ ಮಡಿವಾಳ, ಭಗವಾನರಾವ್ ಮಡಿವಾಳ, ದತ್ತು ಮಡಿವಾಳ ಹುಮನಾಬಾದ್, ಬಸವರಾಜ ಮಡಿವಾಳ ಚಿಟಗುಪ್ಪ ಹಾಗೂ ಸುಧೀರ ಮಡಿವಾಳ ಔರಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT