ಬೀದರ್: ಜಿಲ್ಲಾಡಳಿತದ ವತಿಯಿಂದ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಫೆ.1ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜಿಲ್ಲಾ ರಂಗ ಮಂದಿರದ ವರೆಗೆ ಮಡಿವಾಳ ಮಾಚಿದೇವರ ಮೆರವಣಿಗೆ ನಡೆಯಲಿದೆ. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಮಡಿವಾಳ ಸಂಘ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಮಡಿವಾಳ ತಿಳಿಸಿದ್ದಾರೆ.

ಫೆ.೧ ರಂದು ತಂಗಡಿಯಲ್ಲಿ ಹಡಪದ ಜನಜಾಗೃತಿ ಸಮಾವೇಶ

ಬೀದರ್: ತಂಗಡಗಿಯ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಟ್ರಸ್ಟ್, ಬೆಂಗಳೂರಿನ ಅಖಿಲ ಕರ್ನಾಟಕ ಹಡಪದಪ್ಪ ಅಪ್ಪಣ್ಣ ಸಮಾಜ ಸೇವಾ ಸಂಘ ಹಾಗೂ ಕರ್ನಾಟಕ ರಾಜ್ಯ ಹಡಪದ ನೌಕರರ ವರ್ಗ ಮತ್ತು ಮಹಿಳಾ ಸಮಿತಿಗಳ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯಲ್ಲಿ ಫೆಬ್ರುವರಿ ೧ ರಂದು ಬೆಳಿಗ್ಗೆ ೧೧ ಗಂಟೆಗೆ ಹಡಪದ ಜನಜಾಗೃತಿ ಸಮಾವೇಶ ನಡೆಯಲಿದೆ.

ಇದೇ ಸಂದರ್ಭದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡಗಳ ಅಡಿಗಲ್ಲು ಸಮಾರಂಭವನ್ನೂ ಆಯೋಜಿಸಲಾಗಿದೆ. ಬೀದರ್ ಜಿಲ್ಲೆಯ ಹಡಪದ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹಡಪದ ಸಮಾಜದ ಯುವ ಮುಖಂಡ ರೇವಣಸಿದ್ದ ಹಡಪದ ಹಳೆಂಬುರ ಮನವಿ ಮಾಡಿದ್ದಾರೆ.

ಆದಿವಾಸಿ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಪದಾಧಿಕಾರಿಗಳು

ಬೀದರ್: ಆದಿವಾಸಿ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯು ಈಚೆಗೆ ಸಭೆ ಸೇರಿ ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ.

ಅಧ್ಯಕ್ಷರಾಗಿ ಸುನೀತಾ ಬಿರಾದರ, ಪ್ರಧಾನ ಕಾರ್ಯದರ್ಶಿಯಾಗಿ ನಾಗಮ್ಮ ಅಮಗೊಂಡ, ಉಪಾಧ್ಯಕ್ಷರಾಗಿ ಅನುರಾಧಾ ಸಂಜುಕುಮಾರ ನಾಗೇಶ್ವರ, ಗೀತಾ ಮೂಲಗೆ, ಸೇವಂತಿಕಾ ಮುನಿಯಪ್ಪ ತಿರುಮಲಾ, ಸುನೀತಾ ಪ್ರದೀಪ ಪಾರ್, ಖಜಾಂಚಿಯಾಗಿ ಕಮಲಾಬಾಯಿ ಚಿದ್ರಿ, ಸದಸ್ಯರಾಗಿ ಜಯಾ ವಿವೇಕ ರಾಯಸಿಡಮ ಹಾಗೂ ಶಶಿಕಲಾ ಮೇತ್ರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆದಿವಾಸಿ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ವಿಜಯಕುಮಾರ ಡುಮ್ಮೆ ತಿಳಿಸಿದ್ದಾರೆ.

ಚಿತ್ರಕಲಾ ಶಿಕ್ಷಕ ನಯೂಮ್ ಶ್ರದ್ಧಾಂಜಲಿ ಕಾರ್ಯಕ್ರಮ

ಬೀದರ್: ಯೋಗೀಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮತ್ತು ಚಿತ್ರಕಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಡಿ ನಯೂಮ್ ಹಾಗೂ ಶ್ರೀ ಮಾರ್ಕೆಟಿಂಗ್ ಮಾಲೀಕ ಶಿವಕುಮಾರ ಪಾಟೀಲರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ದತ್ತಾತ್ರೇಯ ಪಾಟೀಲ, ಎಂಡಿ ಮಜಬಾ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುಕಾಂತ ಠಾಕೂರ್, ಯೋಗೇಶ ಮಠದ, ಎಂ.ಡಿ. ಯುಸುಫ್, ಎಂ.ಡಿ.ಶರೀಫ್ ಆನಂದ ದಿನೇ, ಬಿಕೆ ಬಡಿಗೇರ, ಕಿಶೋರಕುಮಾರ, ಸಂತೋಷ ವನೆಕೇರಿ, ಶಕೀಲ, ಮುಶೀರ್ ಅಹ್ಮದ್ ಕುರ್ರಂ, ಅಜಯ್ ಜುಸುವ, ವಿಶ್ವನಾಥ ಶೀಲವಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.