ಗುರುವಾರ , ಡಿಸೆಂಬರ್ 3, 2020
18 °C
ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ ಸಂದೇಶ

ಬೀದರ್‌: ಸನ್ಮಾರ್ಗದೆಡೆ ಸಾಗಲು ದೇವರು ಅನುಗ್ರಹಿಸಲಿ- ವಹೀದ್‌ ಖಾಸ್ಮಿ ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕರುಣಾಳು ಪ್ರವಾದಿ ಮಹಮ್ಮದ್‌ ಅವರು ಈ ಭೂಲೋಕದ ಮೇಲೆ ಆಗಮಿಸಿದಾಗ ಜಗತ್ತು ಅಜ್ಞಾನ ಹಾಗೂ ಅಂಧಕಾರದಲ್ಲಿ ಇತ್ತು. ಅನ್ಯಾಯ ಅತ್ಯಾಚಾರ ಸಾಮಾನ್ಯವಾಗಿತ್ತು. ಬಲಶಾಲಿಗಳು ದುರ್ಬಲರ ಮೇಲೆ ಅನ್ಯಾಯ ಮಾಡುತ್ತಿದ್ದರು. ಹೆಣ್ಣುಮಕ್ಕಳನ್ನು ಜೀವಂತ ಹೂಳಲಾಗುತ್ತಿತ್ತು. ಪ್ರವಾದಿ ಅವರು ತಮ್ಮ ಅತ್ಯುತ್ತಮ ಗುಣಗಳ ಮೂಲಕ ಏಕದೇವ ಉಪಾಸನೆಯ ಸಂದೇಶ ನೀಡಿದರು.
ತಾನು ಪ್ರವಾದಿಯಾಗಿದ್ದೇನೆ ಎಂದು ಸಾರಿದರು. ಇವರ ಮಾತನ್ನು ಕೇಳಿದವರು ಹಾಗೂ ಅನುಸರಿಸಿದವರು ಬದುಕಿನ ಅವಧಿಯಲ್ಲಿ ಹಾಗೂ ಮರಣಾನಂತರವೂ ಸಂತೃಪ್ತಿ ಪಡೆದರು. ಕ್ಷಮಾ ಗುಣದಿಂದ ಕಡು ವೈರಿಗಳನ್ನು ಕ್ಷಮಿಸಿ ತಮ್ಮ ಸಮೀಪ ಮಾಡಿಕೊಂಡರು.

ಪ್ರಸ್ತುತ ಯಾರಾದರೂ ಅವರ ಅತ್ಯುತ್ತಮ ಗುಣ, ನಡತೆ ಹಾಗೂ ಪವಿತ್ರ ಜೀವನದ ಮೇಲೆ ದೃಷ್ಟಿ ಹಾಯಿಸಿ ಸನ್ಮಾರ್ಗದ ಅನ್ವೇಷಣೆ ಮಾಡಲು ಬಯಸುತ್ತಾರೋ ಅವರು ಸನ್ಮಾರ್ಗ ಕಾಣುತ್ತಾರೆ. ದೇವರು ಪ್ರತಿಯೊಬ್ಬರಿಗೂ ಪ್ರವಾದಿ ಅವರ ಗುಣ ನಡತೆಯನ್ನು ಅರಿತುಕೊಳ್ಳಲು ಹಾಗೂ ಅನುಸರಿಸಲು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.

-ಮೆಹಮೂದ್‌ ಗವಾನ್‌ ಮಸೀದಿಯ ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.