ಶನಿವಾರ, ಮಾರ್ಚ್ 6, 2021
32 °C

ಸರ್ಕಾರ ಬೋಸ್ ಜಯಂತಿ ಆಚರಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸುಭಾಷ್‍ಚಂದ್ರ ಬೋಸ್ ಜಯಂತಿಯನ್ನು ಪ್ರತಿ ವರ್ಷ ರಾಜ್ಯ ಸರ್ಕಾರವೇ ಆಚರಿಸಬೇಕು ಎಂದು ಜೈ ಹಿಂದ್ ಸಂಘಟನೆ ಅಧ್ಯಕ್ಷ ವೀರೂ ದಿಗ್ವಾಲ್ ಒತ್ತಾಯಿಸಿದರು.

ನಗರದ ಮಂಗಲಪೇಟ್ ಬಡಾವಣೆಯ ವೃತ್ತದಲ್ಲಿ ನಡೆದ ಸುಭಾಷ್‍ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರು ಬೋಸ್ ಅವರ ತತ್ವ, ಆದರ್ಶಗಳನ್ನು ಪಾಲಿಸಬೇಕು. ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಫಿಲೋಮನ್‍ರಾಜ್ ಪ್ರಸಾದ್, ದೇವೇಂದ್ರ ದಿಗ್ವಾಲ್, ಸುಭಾಷ ಮಡಿವಾಳ, ದತ್ತು ಗುತ್ತೇದಾರ್, ಡಾ. ಶಾಮರಾವ್, ಅಭಿಷೇಕ ರೆಡ್ಡಿ ಇದ್ದರು.

ಶೌರ್ಯ ದಿನ ಆಚರಣೆ: ಇಲ್ಲಿಯ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ಶೌರ್ಯ ದಿನವಾಗಿ ಆಚರಿಸಲಾಯಿತು.

ಪಕ್ಷದ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಳಿ, ಗೋಪಾಲಕೃಷ್ಣ, ಸಂತೋಷ ಪಾಟೀಲ, ಸಂಜು ಜೀರ್ಗೆ, ಮೃತ್ಯುಂಜಯ, ವಿಶಾಲ್ ಅತಿವಾಳೆ, ಪವನ್ ಉಂಡೆ, ರಾಜು ಕೋಮಟಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.