ಬೀದರ್: ‘ಬಡಾವಣೆಯ ಪ್ರಗತಿಗಾಗಿ ಎಲ್ಲರೂ ನಿಸ್ವಾರ್ಥದಿಂದ ಕೆಲಸ ಮಾಡಿದರೆ ತಾನಾಗಿಯೇ ಬಡಾವಣೆ ಪ್ರಗತಿ ಹೊಂದುತ್ತದೆ’ ಎಂದು ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.

ಜೈ ಹನುಮಾನ್ ಹಿರಿಯ ನಾಗರಿಕರ ಸಂಘದಿಂದ ನಗರದ ರಾಂಪೂರೆ ಕಾಲೊನಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಓಪನ್ ಜಿಮ್ ಉದ್ಘಾಟಿಸಿ ಮಾತನಾಡಿದರು.

ಬಡಾವಣೆಯ ಪ್ರಗತಿಗಾಗಿ ಎಲ್ಲರೂ ಕಾಳಜಿ ಪೂರ್ವಕವಾಗಿ ನಿಸ್ವಾರ್ಥ ಭಾವದಿಂದ ಸೇವೆ ಮಾಡಬೇಕು. ಸಮಾಜಮುಖಿಯಾಗಿ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಅಚ್ಚುಕಟ್ಟಾಗಿ ಕೆಲಸಗಳು ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ. ಅಂತಹ ಜೀವನ ನಮ್ಮದಾಗಲಿ. ಇನ್ನೊಬ್ಬರು ತನು,ಮನ, ಧನದಿಂದ ಸಮಾಜ ಸೇವೆ ಮಾಡಿದಾಗ ಅವರ ಬಗ್ಗೆ ನಮಗೆ ಧನ್ಯತಾ ಭಾವ ಮೂಡಿ ಬರಬೇಕು ಎಂದರು.

ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿರುವ ರಾಜೇಂದ್ರಕುಮಾರ ಗಂದಗೆ, ಬೇಂದ್ರೆ ನುಡಿಸಿರಿ ಪ್ರಶಸ್ತಿ ಪುರಸ್ಕೃತ ಎಂ. ಜಿ. ದೇಶಪಾಂಡೆ, ಡಾಕ್ಟರೇಟ್ ಪದವಿ ಪಡೆದ ಶ್ರೀಮಂತ ಸಪಾಟೆ ಹಾಗೂ ದಾಸ ಸಾಹಿತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ಬಾಲಾಜಿ ಅಮರವಾಡಿ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಹಂಗರಗಿ, ಸದಸ್ಯರಾದ ಪ್ರಭು ಶೆಟ್ಟಿ ಪಾಟೀಲ, ರಾಜಾರಾಮ ಚಿಟ್ಟಾ, ಶಶಿಧರ್ ಹೊಸಳ್ಳಿ, ಪ್ರಮುಖರಾದ ರಮೇಶ್ ಇಟಗಿಕರ್, ಬಾಬು ಗೊಂಡ, ಆರ್.ಎಸ್. ಬಿರಾದಾರ, ದತ್ತಾತ್ರಿ ಕುಲಕರ್ಣಿ, ಸುರೇಶ ಬಾಬು, ಕಾಶಿನಾಥ ಸೂರ್ಯವಂಶಿ, ದಿನಕರ್ ಕುಲಕರ್ಣಿ, ಧನರಾಜ್ ನಿಡೋದೆ, ಶಂಭುಲಿಂಗ ವಾಲ್ದೊಡ್ಡಿ, ಶಂಕರ್ ಬಲ್ಲೂರ್ ಸಿದ್ರಾಮಪ್ಪ ಬುಳ್ಳಾ, ಬಸವರಾಜ್ ಪೂಜಾರ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.