ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಚವಾಣ್

Last Updated 16 ಅಕ್ಟೋಬರ್ 2021, 3:06 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನ ಸೇವಾತಾಂಡಾ, ಚಿಮೆಗಾಂವ್ ತಾಂಡಾ, ಮೆಡಪಳ್ಳಿ, ಗಾಂಧಿನಗರ ತಾಂಡಾಗಳಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡ ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ, ಅಖಂಡ ಹರಿನಾಮ ಸಪ್ತಾಹದಲ್ಲಿ ಭಾಗವಹಿಸಿದ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಭಜನೆ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. ಭಜನಾ ತಂಡದೊಂದಿಗೆ ಬೆರೆತು ಫುಗಡಿ ಆಡುವ ಮೂಲಕ ಭಕ್ತರ ಉತ್ಸಾಹ ಹೆಚ್ಚಿಸಿದರು.

ತಂಡದವರೊಂದಿಗೆ ಇದಕ್ಕೂ ಮುನ್ನ ಗ್ರಾಮದ ಪ್ರಮುಖ ದೇವಸ್ಥಾನದಲ್ಲಿ ದೇವಿ ದರ್ಶನ ಪಡೆದು ಅಗ್ಗಿಷ್ಟಿಕೆಗೆ ತುಪ್ಪ ಹಾಕುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಕಮಲನಗರ ತಾಲ್ಲೂಕಿನ ಹಂದಿಕೇರಾ, ಸೇವಾತಾಂಡಾ, ಚಿಮ್ಮೆಗಾಂವ್, ಖಂಡೀಕೇರಿ, ಮಾಳೆಗಾಂವ್ ತಾಂಡಾಗಳಲ್ಲಿ ಮೂರ್ತಿ ಪ್ರಾತಿಷ್ಠಾಪಿಸಿದ ಅಂಬಾಭವಾನಿ ಮಂದಿರಗಳಿಗೆ ಭೇಟಿ ನೀಡಿ, ಪೂಜೆಯಲ್ಲಿ ಭಾಗವಹಿಸಿ, ದರ್ಶನ ಪಡೆದರು.

ನಾಡಿನಿಂದ ಕೋವಿಡ್ ಸಂಪೂರ್ಣ ನಿರ್ಮೂಲನೆಯಾಗಿ ಜನಜೀವನ ಸುಗಮವಾಗಲಿ, ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂದು ಸಚಿವರು ಪಾರ್ಥನೆ ಸಲ್ಲಿಸಿದರು.

ಜಿಲ್ಲಾ ಕಾರ್ಯದರ್ಶಿ ಹಣಮಂತ ಸೂರನೂರು, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಜಿಪಂ ಮಾಜಿ ಸದಸ್ಯ ಮಾರುತಿ ಚವಾಣ, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಬಂಟಿ ರಾಂಪುರೆ, ಮುಖಂಡ ದಿಲೀಪ ಚವಾಣ್, ಸಚೀನ ರಾಠೋಡ್, ಜೈಪಾಲ, ಅನೀಲ ಪವಾರ, ಸುಭಾಷ ರಾಠೋಡ್, ಅನೀಲಕುಮಾರ ಬಿರಾದಾರ, ವಸಂತ ವಕೀಲ, ಸುಜೀತ ರಾಠೋಡ, ಅನೀಲಕುಮಾರ ದೇಶಮುಖ, ಬನ್ಸಿಲಾಲ, ಶಿವಾಜಿ ಪವಾರ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT