ಬುಧವಾರ, ಅಕ್ಟೋಬರ್ 21, 2020
25 °C

ಸಚಿವ ಪ್ರಭು ಚವ್ಹಾಣ್‌ಗೆ ಕೋವಿಡ್‌ ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಪಶು ಸಂಗೋಪನೆ, ಹಜ್ ಹಾಗೂ ವಕ್ಫ್ ಸಚಿವ ಪ್ರಭು ಚವ್ಹಾಣ್ ಅವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. 

ಸೆಪ್ಟೆಂಬರ್ 8 ರಂದು ಚವ್ಹಾಣ್ ಅವರ ಕಾರು ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಪಾಸಿಟಿವ್ ಬಂದ ಕಾರಣ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದರು. ಬುಧವಾರ ಸಚಿವರು ವೈದ್ಯರನ್ನು ಕರೆಯಿಸಿ ಪರೀಕ್ಷೆ ಮಾಡಿಸಿಕೊಂಡು ಗಂಟಲು ದ್ರವ ಮಾದರಿ ಕೊಟ್ಟಿದ್ದರು. ಗುರುವಾರ ವರದಿ ಪಾಸಿಟಿವ್‌ ಬಂದಿದೆ.

ಸಚಿವರ ಸಹೋದರ ಪುತ್ರ ದಿಲೀಪ್ ಚವ್ಹಾಣ್ ಅವರಿಗೂ ಸೋಂಕು ಧೃಢಪಟ್ಟಿದೆ. ಈಚೆಗೆ ಸಚಿವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು