ಶುಕ್ರವಾರ, ಮಾರ್ಚ್ 31, 2023
29 °C

‘ಬೆಲೆ ಏರಿಕೆಯೇ ಮೋದಿ ಸರ್ಕಾರದ ಸಾಧನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಪೆಟ್ರೋಲಿಯಂ ಹಾಗೂ ಇತರೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಲ್ಲಿಯ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸೈಕಲ್ ಜಾಥಾ ನಡೆಸಿದರು.

ಪಟ್ಟಣದ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಸೈಕಲ್ ಜಾಥಾ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಕೇಂದ್ರದ ಜನ ವಿರೋಧಿ ನೀತಿಗೆ ತರಾಟಗೆ ತೆಗೆದುಕೊಂಡರು. ‘70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ಮೋದಿ ಅವರು ಎರಡು ಅವಧಿಯಲ್ಲಿ ನೀವು ಏನು ಮಾಡಿದ್ದೀರಿ ಎಂದು ಉತ್ತರಿಸಬೇಕು. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೆ ಏರಿಸಿದ್ದು ಮೋದಿ ಸರ್ಕಾರದ ಬಹುದೊಡ್ಡ ಸಾಧನೆ’ ಎಂದು ಟೀಕಿಸಿದರು.

ತಾಲ್ಲೂಕು ಕಾಂಗ್ರೆಸ್ ಉಸ್ತುವಾರಿ ಕನ್ನಿರಾಮ ರಾಠೋಡ, ‘ಕೇಂದ್ರ ಸರ್ಕಾರದ ನೀತಿ ಬಡವರು, ರೈತರಿಗೆ ತೀವ್ರ ಅನ್ಯಾಯ ಮಾಡಿದೆ. ಈ ಸರ್ಕಾರ ಕಿತ್ತೊಗೆಯಲು ಜನ ಬಯಸಿದ್ದಾರೆ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ‘ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಸಮರ್ಪಕ ಬಿತ್ತನೆ ಬೀಜ ಒದಗಿಸಿಲ್ಲ. ಕಳೆದ ಸಾಲಿನ ಅತಿವೃಷ್ಟಿ ಹಾಗೂ ಬೆಳೆ ಹಾನಿ ಪರಿಹಾರ ಇಂದಿಗೂ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಆನಂದ ಚವಾಣ್, ಯುವ ಕಾಂಗ್ರೆಸ್‍ನ ದತ್ತಾತ್ರಿ ಬಾಪುರೆ, ಸುಧಾಕರ ಕೊಳ್ಳೂರ್, ಶರಣಪ್ಪ ಪಾಟೀಲ ಮಾತನಾಡಿದರು.

ಕಾಂಗ್ರೆಸ್ ತಾಲ್ಲೂಕು ವಕ್ತಾರ ಸಾಯಿಕುಮಾರ ಘೋಡ್ಕೆ, ಧುರೀಣ ಬಸವರಾಜ ದೇಶಮುಖ, ರಾಮಣ್ಣ ವಡೆಯರ್, ಡಾ.ಫಯಾಜ್‍ಅಲಿ, ನೆಹರು ಪಾಟೀಲ, ಸಂದೀಪ ಮಾನೆ, ರಾಜಕುಮಾರ ಮುದಾಳೆ, ಅನೀಲ ವಡೆಯರ್, ಗುಂಡುರಾವ, ಪ್ರವೀಣ ಕದಮ, ಬಾಲಾಜಿ ಕಾಸಲೆ, ಪ್ರಕಾಶ ಜಾಧವ್, ಸತೀಶಕುಮಾರ ಘೋಡ್ಕೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.